Select Your Language

Notifications

webdunia
webdunia
webdunia
webdunia

ಬಾಕಿ ದುಡ್ಡು ಉಳಿಸಿದ ಸಂಸ್ಥೆ ವಿರುದ್ಧ ಧೋನಿ ದೂರು

ಬಾಕಿ ದುಡ್ಡು ಉಳಿಸಿದ ಸಂಸ್ಥೆ ವಿರುದ್ಧ ಧೋನಿ ದೂರು
ನವದೆಹಲಿ , ಶುಕ್ರವಾರ, 13 ಏಪ್ರಿಲ್ 2018 (08:55 IST)
ನವದೆಹಲಿ: ಬ್ರಾಂಡ್ ಅಂಬಾಸಿಡರ್ ಆಗಿದ್ದಕ್ಕೆ ನೀಡಬೇಕಾಗಿದ್ದ ಸುಮಾರು 150 ಕೋಟಿ ರೂ. ವೇತನವನ್ನು ನೀಡದೇ ಇರುವ ಬಿಲ್ಡರ್ ಸಂಸ್ಥೆ ಅಮ್ರಪಾಲಿ ಗ್ರೂಪ್ ವಿರುದ್ಧ ಕ್ರಿಕೆಟಿಗ ಧೋನಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಧೋನಿ ರಾಯಭಾರಿ ಒಪ್ಪಂದಗಳನ್ನು ನಿಭಾಯಿಸುವ ರಿತಿ ಸ್ಪೋರ್ಟ್ಸ್ ಸಂಸ್ಥೆ ದೆಹಲಿ ಹೈಕೋರ್ಟ್ ಗೆ ದೂರು ನೀಡಿದೆ. ಧೋನಿ ಹೊರತಾಗಿ ಕ್ರಿಕೆಟಿಗ ಭುವನೇಶ್ವರ್ ಕುಮಾರ್, ಫಾ ಡು ಪ್ಲೆಸಿಸ್ ಮುಂತಾದ ಕ್ರಿಕೆಟಿಗರ ರಾಯಭಾರಿ ಒಪ್ಪಂದಗಳನ್ನು ಇದೇ ಸಂಸ್ಥೆ ನಿಭಾಯಿಸುತ್ತಿದೆ.

ಅಮ್ರಪಾಲಿ ಸಂಸ್ಥೆ ನಷ್ಟದ ಸುಳಿಗೆ ಸಿಲುಕಿದ್ದು, ಹಲವು ಜನರಿಗೆ ಅಪಾರ್ಟ್ ಮೆಂಟ್ ಗಳನ್ನು ಕಟ್ಟಿಸಿಕೊಡುವುದಾಗಿ ಒಪ್ಪಂದ ಮಾಡಿಕೊಂಡು ಯೋಜನೆ ಪೂರ್ಣಗೊಳಿಸದೇ ಮೋಸ ಮಾಡಿತ್ತು. ಹೀಗಾಗಿ ಧೋನಿ ಈ ಸಂಸ್ಥೆಯೊಂದಿಗಿನ ಒಪ್ಪಂದವನ್ನು 2016 ರಲ್ಲಿ ರದ್ದುಗೊಳಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಮನೆಗೆ ಬಂತು ಮತ್ತೊಂದು ದುಬಾರಿ ಕಾರು