ಮುಂಬೈ: ದ.ಆಫ್ರಿಕಾ ವಿರುದ್ಧ ಮುಂದಿನ ತಿಂಗಳು ತವರಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಹಿರಿಯ ವಿಕೆಟ್ ಕೀಪರ್ ಧೋನಿಯನ್ನು ಆಯ್ಕೆ ಮಾಡದೇ ಇರುವ ಬಗ್ಗೆ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.
ಟೀಂ ಇಂಡಿಯಾ 15 ಸದಸ್ಯರ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದ್ದು ಈ ಪೈಕಿ ಧೋನಿಗೆ ಸ್ಥಾನ ನೀಡಲಾಗಿಲ್ಲ .ಅವರ ಬದಲಿಗೆ ರಿಷಬ್ ಪಂತ್ ವಿಕೆಟ್ ಕೀಪರ್ ಆಗಿರುತ್ತಾರೆ.
ಆದರೆ ಧೋನಿಯನ್ನು ಆಯ್ಕೆ ಮಾಡದೇ ಇರುವ ಬಗ್ಗೆ ಪ್ರಶ್ನೆ ಮಾಡಿದಾಗ ಎಂಎಸ್ ಕೆ ಪ್ರಸಾದ್, ಧೋನಿಗೆ ಆಯ್ಕೆಗೆ ಲಭ‍್ಯರಿರಲಿಲ್ಲ. ಹೀಗಾಗಿ ಅವರನ್ನು ಆಯ್ಕೆ ಮಾಡಲಿಲ್ಲ ಎಂದು ಸ್ಪಷ್ಟನೆ ನೀಡಿದೆ. ವಿಂಡೀಸ್ ವಿರುದ್ಧವೂ ಧೋನಿ ತಾವು ಲಭ್ಯರಿಲ್ಲ ಎಂದು ಮೊದಲೇ ಹೇಳಿದ್ದರಿಂದ ಅವರನ್ನು ಆಯ್ಕೆ ಮಾಡಿಲ್ಲ ಎಂದು ಆಯ್ಕೆ ಸಮಿತಿ ಹೇಳಿತ್ತು. ಇದೀಗ ಆಫ್ರಿಕಾ ಸರಣಿಗೂ ಅವರಿಲ್ಲ.