Select Your Language

Notifications

webdunia
webdunia
webdunia
webdunia

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 350 ಸಿಕ್ಸರ್: ಧೋನಿ ದಾಖಲೆ

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 350 ಸಿಕ್ಸರ್: ಧೋನಿ ದಾಖಲೆ
ಬೆಂಗಳೂರು , ಗುರುವಾರ, 28 ಫೆಬ್ರವರಿ 2019 (09:54 IST)
ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋತರೂ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ದಾಖಲೆಯೊಂದನ್ನು ಮಾಡಿದ್ದಾರೆ.


23 ಬಾಲ್ ಗಳಲ್ಲಿ 40 ರನ್ ಚಚ್ಚಿದ್ದ ಧೋನಿ ಈ ಪಂದ್ಯದಲ್ಲಿ 3 ಸಿಕ್ಸರ್ ಸಿಡಿಸಿದ್ದರು. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಎಲ್ಲಾ ಮಾದರಿ ಸೇರಿ ಧೋನಿ ಸಿಕ್ಸರ್ ಗಳ ಸಂಖ್ಯೆ 350 ಕ್ಕೇರಿದೆ. ಈ ಮೂಲಕಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತದ ಪರ 350 ಪ್ಲಸ್ ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.

ಅಷ್ಟೇ ಅಲ್ಲದೆ, ಧೋನಿ ಈ ಪಂದ್ಯದಲ್ಲಿ ಟಿ20 ಪಂದ್ಯಗಳಲ್ಲಿ 50 ಸಿಕ್ಸರ್ ಸಿಡಿಸಿದ ದಾಖಲೆಯನ್ನೂ ಮಾಡಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಒಟ್ಟು 13 ಸಿಕ್ಸರ್ ಬಾರಿಸಿದ್ದು, ಇದು ಬೆಂಗಳೂರಿನ ಮೈದಾನದಲ್ಲಿ ಒಂದೇ ಟಿ20 ಪಂದ್ಯದಲ್ಲಿ ತಂಡವೊಂದು ದಾಖಲಿಸಿದ ಗರಿಷ್ಠ ಸಿಕ್ಸರ್ ಗಳಾಗಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ದ್ರಾವಿಡ್ ಮಾಡಿದ ಸಹಾಯ ಸ್ಮರಿಸಿದ ಕೆಎಲ್ ರಾಹುಲ್