Publish Date: Thu, 28 Feb 2019 (09:44 IST)
Updated Date: Thu, 28 Feb 2019 (09:47 IST)
ಬೆಂಗಳೂರು: ಅಸಭ್ಯ ಕಾಮೆಂಟ್ ಮಾಡಿ ಕ್ರಿಕೆಟ್ ನಿಂದ ನಿಷೇಧ ಒಂದು ಕಡೆಯಾದರೆ ಫಾರ್ಮ್ ಇಲ್ಲದೇ ಹೆಣಗಾಡುತ್ತಿದ್ದಾಗ ತನಗೆ ರಾಹುಲ್ ದ್ರಾವಿಡ್ ಸಹಾಯ ಮಾಡಿದರು ಎಂದು ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಸ್ಮರಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯ ಎರಡೂ ಪಂದ್ಯದಲ್ಲಿ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ ಬಳಿಕ ಅದ್ಭುತ ಫಾರ್ಮ್ ಪ್ರದರ್ಶಿಸುತ್ತಿರುವ ಕೆಎಲ್ ರಾಹುಲ್ ತನ್ನ ಬ್ಯಾಟಿಂಗ್ ಸುಧಾರಣೆಗೆ ದ್ರಾವಿಡ್ ಸರ್ ಸಹಾಯ ಮಾಡಿದರು ಎಂದಿದ್ದಾರೆ. ದ್ರಾವಿಡ್ ಕೋಚಿಂಗ್ ನಲ್ಲಿ ರಾಹುಲ್ ಕೆಲವು ದಿನಗಳ ಕಾಲ ಭಾರತ ಎ ತಂಡದಲ್ಲಿ ಆಡಿದ್ದರು.
‘ಭಾರತ ಎ ತಂಡದಲ್ಲಿದ್ದಾಗ ದ್ರಾವಿಡ್ ಸರ್ ಜತೆಗೆ ತುಂಬಾ ಸಮಯ ಕಳೆಯುವ ಅವಕಾಶ ಸಿಕ್ಕಿತು. ಅವರು ಹಲವು ರೀತಿಯಲ್ಲಿ ನನ್ನ ಬ್ಯಾಟಿಂಗ್ ಸುಧಾರಿಸಿದರು. ನಾನು ಕ್ರೀಸ್ ನಲ್ಲಿ ಹೆಚ್ಚು ಸಮಯ ಕಳೆಯಲು ಪ್ರಾರಂಭಿಸಿದೆ. ಇದರಿಂದ ನನಗೆ ಯಶಸ್ಸು ಸಿಕ್ಕಿತು’ ಎಂದು ರಾಹುಲ್ ನೆನೆಸಿಕೊಂಡಿದ್ದಾರೆ. ಇನ್ನು, ಕಾಫಿ ವಿತ್ ಕರಣ್ ಶೋನಲ್ಲಿ ಹಾರ್ದಿಕ್ ಪಾಂಡ್ಯ ಜತೆಗೆ ಮಹಿಳೆಯರ ಮೇಲೆ ಅಸಭ್ಯ ಕಾಮೆಂಟ್ ಮಾಡಿದ ವಿವಾದದಿಂದ ನಾನು ಒಬ್ಬ ವ್ಯಕ್ತಿಯಾಗಿ ಮತ್ತಷ್ಟು ಸುಧಾರಿಸಲು ಸಹಾಯ ಮಾಡಿತು ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.