Daily Horoscope
✕

ಪತ್ರಿಕೆ ಓದಬೇಡ ಎಂದು ಈ ಯುವ ಕ್ರಿಕೆಟಿಗನಿಗೆ ಸೂಚಿಸಿದ್ದರಂತೆ ಧೋನಿ!

Webdunia
ಸೋಮವಾರ, 30 ಜುಲೈ 2018 (09:01 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಯುವ ಕ್ರಿಕೆಟಿಗರಿಗೆ ಹಲವು ರೀತಿಯಲ್ಲಿ ಆದರ್ಶಪ್ರಾಯರು. ಯುವ ಕ್ರಿಕೆಟಿಗ ಶ್ರೇಯಸ್  ಐಯರ್ ತಮಗೆ ಧೋನಿ ನೀಡಿದ ಸಲಹೆಯೊಂದನ್ನು ಸ್ಮರಿಸಿಕೊಂಡಿದ್ದಾರೆ.

‘ನಾನು ಟೀಂ ಇಂಡಿಯಾಗೆ ಆಯ್ಕೆಯಾದಾಗ ಧೋನಿ ನನಗೆ ಯಾವುದೇ ರೀತಿಯ ಪತ್ರಿಕೆ, ಮಾಧ್ಯಮಗಳ ಸುದ್ದಿಗಳನ್ನು ಓದಬೇಡ. ಇದರಿಂದ ಏಕಾಗ್ರತೆಗೆ ಭಂಗವಾಗಲ್ಲ ಎಂದು ಸಲಹೆ ನೀಡಿದ್ರು. ಎಷ್ಟು ಸಾಧ್ಯವೋ ಅಷ್ಟು ಸೋಷಿಯಲ್ ಮೀಡಿಯಾದಿಂದ ದೂರವಿರು ಎಂದು ಸಲಹೆ ನೀಡಿದ್ದರು’ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿರುವುದರ ಪರಿಣಾಮ ತಾವು ಎದುರಿಸಿದ ಘಟನೆಯೊಂದನ್ನೂ ಶ್ರೇಯಸ್ ಈ ಸಂದರ್ಭದಲ್ಲಿ ವಿವರಿಸಿದ್ದಾರೆ. ‘ಐಪಿಎಲ್ ಹರಾಜು ಮುಗಿದ ಮೇಲೆ ನನಗೆ ಮೊದಲೇ ಗೊತ್ತಿದ್ದ ಹುಡುಗಿಯೊಬ್ಬಳು ಆಗಾಗ ಮೆಸೇಜ್ ಮಾಡಲು ಶುರು ಮಾಡಿದಳು. ನಾನು ಆಕೆಯನ್ನು ಪ್ರಶ್ನಿಸಿದಾಗ ಐಪಿಎಲ್ ಹರಾಜಿನ ಬಗ್ಗೆ ಹೇಳಿದಳು. ಆಗ ನನಗೆ ಗೊತ್ತಾಯಿತು, ಆಕೆ ನನಗೆ ಸಿಕ್ಕಿದ ಶ್ರೀಮಂತಿಕೆ ನೋಡಿ ನನ್ನ ಹಿಂದೆ ಬಿದ್ದಿದ್ದಾಳೆಂದು’ ಎಂದು ಸೋಷಿಯಲ್ ಮೀಡಿಯಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AFG: ಅಫ್ಘಾನಿಸ್ತಾನ ವಿರುದ್ಧ ವಿಶ್ವದಾಖಲೆಯ ಶತಕ ಸಿಡಿಸಿ ವಿಶಿಷ್ಟವಾಗಿ ಸಂಭ್ರಮಿಸಿದ ಅಭಿಷೇಕ್ ಶರ್ಮಾ Video

ಟೀಂ ಇಂಡಿಯಾ ಮುಖ್ಯ ಆಯ್ಕೆಗಾರನ ಸ್ಥಾನಕ್ಕೆ ಅಜಿತ್ ಅಗರ್ಕರ್ ಬಳಿಕ ಕೇಳಿಬರುತ್ತಿದೆ ಈ ಅಚ್ಚರಿಯ ಹೆಸರು

ಏಷ್ಯನ್ ಗೇಮ್ಸ್ 2026 ಆರಂಭ ಯಾವಾಗ, ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ಸಂಪೂರ್ಣ ವಿವರ

ಪಾಕಿಸ್ತಾನದ ಯುವ ಕ್ರಿಕೆಟಿಗನಿಗೆ ಜಸ್ಪ್ರೀತ್ ಬುಮ್ರಾಗೆ ಆರು ಸಿಕ್ಸರ್ ಚಚ್ಚೋದೇ ಗುರಿಯಂತೆ ನೋಡ್ರಪ್ಪಾ..

ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಗೆ ಶಾಕ್ ಕೊಡಲು ಮುಂದಾದ ಬಿಸಿಸಿಐ

ಮುಂದಿನ ಸುದ್ದಿ
Show comments