Publish Date: Mon, 13 Nov 2023 (10:00 IST)
Updated Date: Mon, 13 Nov 2023 (10:00 IST)
ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ನಿರ್ಣಾಯಕ ಹಂತಕ್ಕೆ ಬಂದಿದ್ದು, ಸೆಮಿಫೈನಲ್ ತಂಡಗಳು ಫೈನಲ್ ಆಗಿವೆ.
ಲೀಗ್ ಹಂತದ ಪಂದ್ಯಗಳು ನಿನ್ನೆಗೆ ಮುಕ್ತಾಯವಾಗಿದ್ದು, ಇನ್ನು ಎರಡು ಸೆಮಿಫೈನಲ್ ಮತ್ತು ಒಂದು ಫೈನಲ್ ಪಂದ್ಯ ಮಾತ್ರ ಈ ಕೂಟದಲ್ಲಿ ನಡೆಯಲಿದೆ. ಭಾರತ, ದ.ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ.
ಈ ಪೈಕಿ ಮೊದಲ ಸೆಮಿಫೈನಲ್ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಂಬೈನ ವಾಂಖೆಡೆ ಮೈದಾನದಲ್ಲಿ ನವಂಬರ್ 15 ರಂದು ನಡೆಯಲಿದೆ. ಎರಡನೇ ಸೆಮಿಫೈನಲ್ ಪಂದ್ಯ ಮರುದಿನ ಅಂದರೆ ನವಂಬರ್ 16 ರಂದು ಕೋಲ್ಕೊತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ಫೈನಲ್ ಪಂದ್ಯ ನವಂಬರ್ 19 ರಂದು ಗುಜರಾತ್ ಅಹಮ್ಮದಾಬಾದ್ ಸ್ಟೇಡಿಯಂ ನಲ್ಲಿ ನಡೆಯುವುದು.