Select Your Language

Notifications

webdunia
webdunia
webdunia
webdunia

ಏಕದಿನ ವಿಶ್ವಕಪ್: ನೆದರ್ಲ್ಯಾಂಡ್ಸ್ ವಿರುದ್ಧ ಟಾಸ್ ಗೆದ್ದ ಟೀಂ ಇಂಡಿಯಾ

ಏಕದಿನ ವಿಶ್ವಕಪ್: ನೆದರ್ಲ್ಯಾಂಡ್ಸ್ ವಿರುದ್ಧ ಟಾಸ್ ಗೆದ್ದ ಟೀಂ ಇಂಡಿಯಾ
ಬೆಂಗಳೂರು , ಭಾನುವಾರ, 12 ನವೆಂಬರ್ 2023 (13:42 IST)
ಬೆಂಗಳೂರು: ಏಕದಿನ ವಿಶ್ವಕಪ್ ನಲ್ಲಿ ಇಂದು ಕೊನೆಯ ಲೀಗ್ ಪಂದ್ಯ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿದ್ದು ಟಾಸ್ ಗೆದ್ದ ರೋಹಿತ್ ಪಡೆ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.

ಭಾರತ ಈಗಾಗಲೇ ಸೆಮಿಫೈನಲ್ ತಲುಪಿದ್ದರೆ ನೆದರ್ಲ್ಯಾಂಡ್ಸ್ ಈಗಾಗಲೇ ಕೂಟದಿಂದ ಹೊರಬಿದ್ದಿದೆ. ಈ ವಿಶ್ವಕಪ್ ನ ಕೊನೆಯ ಲೀಗ್ ಪಂದ್ಯ ಇದಾಗಿದ್ದು, ಈ ಪಂದ್ಯದ ಫಲಿತಾಂಶಕ್ಕೆ ಹೆಚ್ಚು ಮಹತ್ವವಿಲ್ಲ. ಹಾಗಿದ್ದರೂ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್ ಗೇರಲು ಬಯಸಲಿದೆ.

ಇದೇ ಕಾರಣಕ್ಕೆ ಟೀಂ ಇಂಡಿಯಾ ಇಂದು ಯಾವುದೇ ಬದಲಾವಣೆಯಿಲ್ಲದೇ ಕಣಕ್ಕಿಳಿದಿದೆ. ಅತ್ತ ನೆದರ್ಲ್ಯಾಂಡ್ಸ್ ಕೂಡಾ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ದೀಪಾವಳಿ ಹಬ್ಬದ ಸೆಲೆಬ್ರೇಷನ್ ನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಟೀಂ ಇಂಡಿಯಾ ಕ್ರಿಕೆಟಿಗರು