ಏಕದಿನ ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ ಗೇರಲು ಇಂದು ಪಾಕ್ ವಿರುದ್ಧ ಗೆಲ್ಲಲೇಬೇಕು ನ್ಯೂಜಿಲೆಂಡ್

Webdunia
ಶನಿವಾರ, 4 ನವೆಂಬರ್ 2023 (08:40 IST)
ಬೆಂಗಳೂರು: ಏಕದಿನ ವಿಶ್ವಕಪ್ ನಲ್ಲಿ ಇಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಇಂದು ಗೆದ್ದವರ ಸೆಮಿಫೈನಲ್ ಹಾದಿ ಸುಗಮವಾಗಲಿದೆ.

ಪಾಕಿಸ್ತಾನ ಇದುವರೆಗೆ ನಡೆದ 7 ಪಂದ್ಯಗಳಿಂದ ಕೇವಲ 3 ಪಂದ್ಯ ಗೆದ್ದಿದೆ. ಹೀಗಾಗಿ ತಂಡದ ಸೆಮಿಫೈನಲ್ ಹಾದಿ ಕಷ್ಟವಾಗಿದೆ. ಹಾಗಿದ್ದರೂ ಅದೃಷ್ಟದ ಭರವಸೆಯಲ್ಲಿದೆ. ಸೋಲಿನ ಜೊತೆಗೆ ಆಂತರಿಕ ಸಂಘರ್ಷಗಳಿಂದಲೇ ಪಾಕ್ ತಂಡಕ್ಕೆ ಬಸವಳಿದಿದೆ.

ಇನ್ನೊಂದೆಡೆ ನ್ಯೂಜಿಲೆಂಡ್ ಕಳೆದ ಮೂರು ಪಂದ್ಯಗಳಲ್ಲಿ ಸತತವಾಗಿ ಸೋತು ಸಂಕಷ್ಟಕ್ಕೀಡಾಗಿದೆ. ಸುಲಭವಾಗಿ ಸೆಮಿಫೈನಲ್ ಗೇರಬಹುದು ಎಂದು ಲೆಕ್ಕಾಚಾರ ಹಾಕಿದ್ದ ಕಿವೀಸ್ ಗೆ ಈಗ ಇಂದಿನ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಸದ್ಯಕ್ಕೆ 7 ಪಂದ್ಯಗಳಿಂದ 4 ಗೆಲುವು ಕಂಡಿರುವ ಕಿವೀಸ್ ಇಂದು ಸೋತರೆ ಸೆಮಿಫೈನಲ್ ಹಾದಿ ಕಷ್ಟವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು, ಬೆಳಿಗ್ಗೆ 10.30 ಕ್ಕೆ ಈ ಪಂದ್ಯ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೇಯಸ್ ಅಯ್ಯರ್ ಹೇಗಿದ್ದಾರೆ ಎಂದಿದ್ದಕ್ಕೆ ಸೂರ್ಯಕುಮಾರ್ ಯಾದವ್ ಹೇಳಿದ್ದೇನು

ಬಿಪಿ, ಪಲ್ಸ್ ಜಾರುತ್ತಲೇ ಇತ್ತು... ಶ್ರೇಯಸ್ ಅಯ್ಯರ್ ಯಾವ ಸ್ಥಿತಿಯಲ್ಲಿದ್ದರು ಗೊತ್ತಾ

IND vs AUS: ನಾಳೆಯಿಂದ ಭಾರತ, ಆಸ್ಟ್ರೇಲಿಯಾ ಟಿ20: ವೇಳಾಪಟ್ಟಿ, ಲೈವ್ ವೀಕ್ಷಣೆ ವಿವರ ಇಲ್ಲಿದೆ

ಶ್ರೇಯಸ್ ಅಯ್ಯರ್ ಸ್ಥಿತಿ ಗಂಭೀರ: ಪೋಷಕರ ತೀರ್ಮಾನವೇನು ಗೊತ್ತಾ

ಶ್ರೇಯಸ್ ಅಯ್ಯರ್ ಆರೋಗ್ಯ ಸ್ಥಿತಿ ಗಂಭೀರ: ಐಸಿಯುವಿನಲ್ಲಿ ಚಿಕಿತ್ಸೆ

ಮುಂದಿನ ಸುದ್ದಿ
Show comments