Publish Date: Sun, 22 Feb 2026 (12:43 IST)
Updated Date: Sun, 22 Feb 2026 (12:44 IST)
ಮುಂಬೈ: ಮಾಜಿ ಕ್ರಿಕೆಟಿಗ ಶಿಖರ್ ಧವನ್ ಅವರು ಜೀವನದಲ್ಲಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಶನಿವಾರ ದೆಹಲಿ ಎನ್‌ಸಿಆರ್‌ನಲ್ಲಿ ತಮ್ಮ ದೀರ್ಘಕಾಲದ ಗೆಳತಿ ಸೋಫಿ ಶೈನ್ ಅವರನ್ನು ವಿವಾಹವಾದರು.
ಧವನ್ ಈ ಹಿಂದೆ ಆಯೇಷಾ ಮುಖರ್ಜಿ ಅವರನ್ನು ವಿವಾಹವಾಗಿದ್ದರು. ಅವರಿಗೆ 11 ವರ್ಷದ ಜೋರಾವರ್ ಧವನ್ ಎಂಬ ಮಗನಿದ್ದಾನೆ. ದಂಪತಿ 2023 ರಲ್ಲಿ ವಿಚ್ಛೇದನ ಪಡೆದರು.
ಶಿಖರ್ ಮತ್ತು ಸೋಫಿ ಜೋಡಿಯು ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. 2025ರಲ್ಲಿ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದರು. ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2025 ಪಂದ್ಯದ ಸಮಯದಲ್ಲಿ ಧವನ್ ಮತ್ತು ಶೈನ್ ಮೊದಲು ಒಟ್ಟಿಗೆ ಕಾಣಿಸಿಕೊಂಡಿದ್ದರು. ಜನವರಿಯಲ್ಲಿ ಧವನ್ ಮತ್ತು ಶೈನ್ ನಿಶ್ಚಿತಾರ್ಥ ಆಗುವುದಾಗಿ ಘೋಷಿಸಿದ್ದರು.
ಸೋಫಿ ಪ್ರಾಡಕ್ಟ್ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಲಿಮೆರಿಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ. ಕ್ರಿಕೆಟ್ ಸೆಲೆಬ್ರಿಟಿಗಳು ಹೆಚ್ಚಾಗಿ ಸೋಷಿಯಲ್ ಮೀಡಿಯಾ ಮತ್ತು ಸಿನಿಮಾ ರಂಗದವರೊಂದಿಗೆ ಸಂಬಂಧ ಹೊಂದುವುದು ಸಾಮಾನ್ಯ. ಆದರೆ, ಸೋಫಿಯ ಪ್ರಕರಣವು ಇದಕ್ಕೆ ಭಿನ್ನವಾಗಿದೆ.
ಸೋಫಿ ಇನ್ಸ್ಟಾಗ್ರಾಮ್‌ನಲ್ಲಿ ಸುಮಾರು 367,000 ಫಾಲೋವರ್ಸ್‌ಗಳನ್ನು ಹೊಂದಿದ್ದು, ಶಿಖರ್ ಜೊತೆಗಿನ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಧವನ್ ಜೊತೆ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.