Publish Date: Mon, 16 Oct 2023 (20:44 IST)
Updated Date: Mon, 16 Oct 2023 (20:45 IST)
ನವದೆಹಲಿ: ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಇಲ್ಲದೇ ಇರುವುದು ಹಲವರಿಗೆ ನಿರಾಸೆ ಉಂಟು ಮಾಡುತ್ತಿತ್ತು. ಆದರೆ ಇದೀಗ ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಒಲಿಂಪಿಕ್ಸ್ ಗೂ ಕ್ರಿಕೆಟ್ ಸೇರ್ಪಡೆಗೊಳಿಸಲಾಗುತ್ತಿದೆ. ಆದರೆ ಇದು 2028 ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ. 2028 ರ ಒಲಿಂಪಿಕ್ಸ್ ಗೆ ಕ್ರಿಕೆಟ್ ನ್ನೂ ಸೇರ್ಪಡೆಗೊಳಿಸಲಾಗಿದೆ.
ಅದರಂತೆ ಟಿ20 ಮಾದರಿಯಲ್ಲಿ ಕ್ರಿಕೆಟ್ ಕೂಟ ನಡೆಯಲಿದೆ. ಕ್ರಿಕೆಟ್ ಜೊತೆಗೆ ಬೇಸ್ ಬಾಲ್, ಸಾಫ್ಟ್ ಬಾಲ್, ಫ್ಲ್ಯಾಗ್ ಫುಟ್ ಬಾಲ್, ಸ್ಕ್ವಾಶ್ ಮುಂತಾದ ಆಟಗಳನ್ನೂ ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ.