Publish Date: Mon, 16 Oct 2023 (09:10 IST)
Updated Date: Mon, 16 Oct 2023 (09:12 IST)
ಲಕ್ನೋ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಸೋಲಿನ ಸುಳಿಗೆ ಸಿಲುಕಿರುವ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ.
ಎರಡೂ ತಂಡಗಳು ಇದುವರೆಗೆ ಆಡಿದ ಎರಡೂ ಪಂದ್ಯಗಳನ್ನು ಸೋತಿವೆ. ವಿಶೇಷವೆಂದರೆ ಆಸ್ಟ್ರೇಲಿಯಾ ಭಾರತ ಮತ್ತು ದ.ಆಫ್ರಿಕಾ ವಿರುದ್ಧ ಬ್ಯಾಟಿಂಗ್ ವೈಫಲ್ಯದಿಂದಲೇ ಸೋಲುಂಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಮತ್ತೆ ಪುಟಿದೇಳುವ ಅನಿವಾರ್ಯತೆಯಲ್ಲಿದೆ.
ಇತ್ತ ಶ್ರೀಲಂಕಾ ಕೂಡಾ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಲಂಕಾಗೆ ಇದಕ್ಕೆ ಮೊದಲು ಆಫ್ರಿಕಾ, ಪಾಕಿಸ್ತಾನ ತಂಡಗಳು ಸೋಲಿನ ರುಚಿ ತೋರಿಸಿತ್ತು. ಈ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಿದರೂ ಲಂಕಾಗೆ ಗೆಲುವಿನ ಅದೃಷ್ಟ ಸಿಕ್ಕಿರಲಿಲ್ಲ. ಇಂದೀಗ ಇತ್ತಂಡಗಳು ಮೊದಲ ಜಯ ಗಳಿಸಲು ಸೆಣಸಾಡಲಿವೆ. ಈ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗುವುದು.