Publish Date: Mon, 16 Oct 2023 (08:50 IST)
Updated Date: Mon, 16 Oct 2023 (09:04 IST)
ನವದೆಹಲಿ: ಏಕದಿನ ವಿಶ್ವಕಪ್ ನಲ್ಲಿ ದುರ್ಬಲ ಅಫ್ಘಾನಿಸ್ತಾನ ವಿರುದ್ಧ ಸೋತ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮುಖಭಂಗ ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ 49.5 ಓವರ್ ಗಳಲ್ಲಿ 284 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಗೆ ಅಗ್ರ ಕ್ರಮಾಂಕ ಕೈ ಕೊಟ್ಟಿತು. ಅಂತಿಮವಾಗಿ ಇಂಗ್ಲೆಂಡ್ 40.3 ಓವರ್ ಗಳಲ್ಲಿ 215 ರನ್ ಗಳಿಗೆ ಆಲೌಟ್ ಆಗುವ ಮೂಲಕ 69 ರನ್ ಗಳ ಹೀನಾಯ ಸೋಲು ಕಂಡಿತು.
ಇದರೊಂದಿಗೆ ಇಂಗ್ಲೆಂಡ್ ತಾನಾಡಿದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಸೋಲು ಕಂಡು ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದೆ. ಅಫ್ಘಾನಿಸ್ತಾನಕ್ಕೆ ಇದು ಈ ಕೂಟದ ಮೊದಲ ಗೆಲುವಾಗಿತ್ತು.