Publish Date: Fri, 25 Feb 2022 (09:10 IST)
Updated Date: Fri, 25 Feb 2022 (09:27 IST)
ಲಕ್ನೋ: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ನಿನ್ನೆ ತಮಾಷೆಯ ಘಟನೆಯೊಂದು ನಡೆದಿದೆ. ಈ ಕ್ಷಣಗಳು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ.
ಯಜುವೇಂದ್ರ ಚಾಹಲ್ ಬೌಲಿಂಗ್ ನಲ್ಲಿ ಲಂಕಾದ ಅಸಲಂಕಾ ವಿರುದ್ಧ ಭಾರತೀಯ ಫೀಲ್ಡರ್ ಗಳು ಎಲ್ ಬಿಡಬ್ಲ್ಯು ತೀರ್ಪಿಗೆ ಅಪೀಲ್ ಇತ್ತರು. ಇದಕ್ಕೆ ಅಂಪಾಯರ್ ಔಟ್ ತೀರ್ಪಿತ್ತರು. ಆದರೆ ಲಂಕನ್ನರು ರಿವ್ಯೂಗೆ ಮನವಿ ಮಾಡಿದರು.
ರಿಪ್ಲೇನಲ್ಲಿ ಬಾಲ್ ಮೊದಲು ಬ್ಯಾಟ್ ಗೆ ತಗುಲಿ ಬಳಿಕ ಪ್ಯಾಡ್ ಗೆ ತಗುಲಿರುವುದು ಸ್ಪಷ್ಟವಾಗಿತ್ತು. ಇದರಿಂದಾಗಿ ಎಲ್ ಬಿಡಬ್ಲ್ಯು ತೀರ್ಪು ನಾಟೌಟ್ ಎಂದು ಬಂತು. ಒಂದು ವೇಳೆ ಭಾರತೀಯರು ಬಾಲ್ ಕ್ಯಾಚ್ ಪಡೆದಿದ್ದರೂ ನಿಸ್ಸಂಶಯವಾಗಿ ಅಸಲಂಕಾ ಔಟಾಗುತ್ತಿದ್ದರು. ಆದರೆ ಎಲ್ ಬಿಗೆ ಮನವಿ ಸಲ್ಲಿಸುವ ಭರದಲ್ಲಿ ಭಾರತೀಯರು ಬಾಲ್ ಕ್ಯಾಚ್ ಹಿಡಿಯುವುದನ್ನೇ ಮರೆತಿದ್ದರು. ರಿಪ್ಲೇ ನೋಡಿದ ಮೇಲೆ ರೋಹಿತ್ ಶರ್ಮಾ ತಮ್ಮ ನಗಲು ಆರಂಭಿಸಿದರೆ, ಪೆವಿಲಿಯನ್ ನಲ್ಲಿ ಕುಳಿತಿದ್ದ ದ್ರಾವಿಡ್ ನಗುತ್ತಲೇ ಹಣೆಗೆ ಚಚ್ಚಿಕೊಂಡರು. ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.