ಮರ್ಯಾದೆ ಇದ್ರೆ ಮೊಹ್ಸಿನ್ ನಖ್ವಿ ಟೀಂ ಇಂಡಿಯಾ ಗೆದ್ದ ಟ್ರೋಫಿ ಹಿಂದಿರುಗಿಸ್ತಾರೆ ಇಲ್ಲಾಂದ್ರೆ.. ಬಿಸಿಸಿಐ ಖಡಕ್ ನಿರ್ಧಾರ

Krishnaveni K
ಸೋಮವಾರ, 29 ಸೆಪ್ಟಂಬರ್ 2025 (15:13 IST)
Photo Credit: X
ಮುಂಬೈ: ಮಾನ ಮರ್ಯಾದೆ ಇದ್ರೆ ಮೊಹ್ಸಿನ್ ನಖ್ವಿ ಟೀಂ ಇಂಡಿಯಾ ಗೆದ್ದ ಟ್ರೋಫಿಯನ್ನು ಹಿಂದಿರುಗಿಸುತ್ತಾರೆ. ಇಲ್ಲ ಅಂದ್ರೆ ನಾವು ಬೇರೆಯೇ ದಾರಿ ಕಂಡುಕೊಳ್ಳಬೇಕಾಗುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸಾಯ್ಕಾ ಎಚ್ಚರಿಕೆ ನೀಡಿದ್ದಾರೆ.

ಏಷ್ಯಾ ಕಪ್ ಫೈನಲ್ ನಲ್ಲಿ ಭಾರತ ಗೆದ್ದ ಬಳಿಕ ಎಸಿಸಿ ಅಧ್ಯಕ್ಷರಾಗಿರುವ ಪಾಕಿಸ್ತಾನದ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದೆ. ಈ ಕಾರಣಕ್ಕೆ ನಖ್ವಿ ನನ್ನ ಟ್ರೋಫಿ, ನನ್ನ ಇಷ್ಟ ಎಂದು ಭಾರತ ಗೆದ್ದ ಟ್ರೋಫಿ, ಮೆಡಲ್ ಗಳ ಸಮೇತ ಹೋಟೆಲ್ ರೂಂಗೆ ತೆರಳಿದ್ದರು.

ಇದು ಈಗ ಭಾರತದ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್, ‘ನಮ್ಮ ದೇಶದ ಜೊತೆಗೆ ಯುದ್ಧಕ್ಕೆ ನಿಂತ ದೇಶದ ಪ್ರತಿನಿಧಿಯಿಂದ ಟ್ರೋಫಿ ಸ್ವೀಕರಿಸುವುದು ನಮಗೆ ಇಷ್ಟವಿರಲಿಲ್ಲ. ಅದರ ಅರ್ಥ ಭಾರತ ಗೆದ್ದ ಟ್ರೋಫಿಯನ್ನು ಅವರೇ ತನ್ನ ಹೋಟೆಲ್ ಗೆ ಎತ್ತಿಕೊಂಡು ಹೋಗಬಹುದು ಎಂದಲ್ಲ. ಇದು ಅನಿರೀಕ್ಷಿತವಾಗಿತ್ತು. ಹಾಗಿದ್ದರೂ ಆತನಲ್ಲಿ ಸ್ವಲ್ಪವಾದರೂ ಮರ್ಯಾದೆ, ನೈತಿಕತೆ ಎನ್ನುವುದು ಏನಾದರೂ ಇದ್ದರೆ ಆತ ತಾನಾಗಿಯೇ ಭಾರತಕ್ಕೆ ಆ ಕಪ್, ಮೆಡಲ್ ಗಳನ್ನು ಹಿಂದಿರುಗಿಸಬೇಕು. ಇಲ್ಲದೇ ಹೋದರೆ ಮುಂದೆ ಬಿಸಿಸಿಐ ಇದೇ ವಿಚಾರವನ್ನು ಐಸಿಸಿ ಮತ್ತು ಎಸಿಸಿ ಸಭೆಗಳಲ್ಲಿ ಪ್ರಸ್ತಾಪಿಸಲಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ಯಾಪ್ಟನ್ ಜೊತೆ ಹೊಂದಾಣಿಕೆಯಾಗ್ತಿಲ್ಲ ಎಂದಾಕ್ಷಣ ಕೋಚ್ ಹುದ್ದೆ ಬಿಟ್ಟಿದ್ದ ಅನಿಲ್ ಕುಂಬ್ಳೆ: ಆದ್ರೆ ಗಂಭೀರ್...

ಗೌತಮ್ ಗಂಭೀರ್ ಹಾಯ್ ಹಾಯ್: ಸೋತ ಬೆನ್ನಲ್ಲೇ ಕೋಚ್ ಗೆ ಮೈದಾನದಲ್ಲೇ ಫ್ಯಾನ್ಸ್ ಮಂಗಳಾರತಿ Video

IND vs SA: ಗೌತಮ್ ಗಂಭೀರ್ ತೊಲಗಬೇಕು, ಇದು ಬಿಸಿಸಿಐಗೂ ತಲುಪಬೇಕು

ಬಾಸ್ಕೆಟ್ ಬಾಲ್ ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರ ಸಾವು, ಎದೆ ಝಲ್ಲೆನಿಸುತ್ತದೆ, Video

ಭಾರತದಲ್ಲಿ ಹೊಸ ಇತಿಹಾಸ ನಿರ್ಮಿಸಿದ ತೆಂಬಾ ಬವುಮಾ ಪಡೆ: ಗೌತಮ್‌ ಗಂಭೀರ್‌ಗೆ ಭಾರೀ ಮುಖಭಂಗ

ಮುಂದಿನ ಸುದ್ದಿ
Show comments