Publish Date: Thu, 18 Oct 2018 (07:49 IST)
Updated Date: Thu, 18 Oct 2018 (07:50 IST)
ಮುಂಬೈ: ವಿದೇಶ ಪ್ರವಾಸದ ಸಂದರ್ಭದಲ್ಲಿ ಸರಣಿಯುದ್ದಕ್ಕೂ ಪತ್ನಿಯರನ್ನು ಜತೆಗೇ ಕರೆದೊಯ್ಯಲು ಅವಕಾಶ ಕೊಡಬೇಕೆಂಬ ವಿರಾಟ್ ಕೊಹ್ಲಿ ಮನವಿಗೆ ಬಿಸಿಸಿಐ ಅಸ್ತು ಎಂದಿದೆ.
ಅದರಂತೆ ಇನ್ನು ಮುಂದೆ ಕ್ರಿಕೆಟಿಗರಿಗೆ ವಿದೇಶ ಪ್ರವಾಸದ ಸಂದರ್ಭದಲ್ಲಿ ಪತ್ನಿಯರನ್ನು ಕರೆದೊಯ್ಯಬಹುದಾಗಿದೆ. ಇದುವರೆಗೆ ಆರಂಭದ ಎರಡು ವಾರ ಮಾತ್ರ ಅವಕಾಶವಿತ್ತು.
ಆದರೆ ಇನ್ನು ಮುಂದೆ ಆರಂಭದ 10 ದಿನದ ಬಳಿಕ ಸರಣಿಯ ಅಂತ್ಯದವರೆಗೂ ಪತ್ನಿಯರನ್ನು ಕ್ರಿಕೆಟಿಗರು ಜತೆಯಲ್ಲಿ ಕರೆದೊಯ್ಯಬಹುದಾಗಿದೆ. ಕ್ರಿಕೆಟ್ ಆಡಳಿತ ಮಂಡಳಿ ಈ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.