Webdunia - Bharat's app for daily news and videos

Install App

ಏಷ್ಯಾ ಕಪ್ ಕ್ರಿಕೆಟ್: ಪಾಕ್ ಬೌಲರ್ ಗಳಿಗೆ ಔಟ್ ಆಫ್ ಸಿಲಬಸ್ ಆಗಿ ಬಂದ ಪಾಂಡ್ಯ-ಜಡೇಜಾ

Webdunia
ಭಾನುವಾರ, 28 ಆಗಸ್ಟ್ 2022 (23:47 IST)
ದುಬೈ: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ನ ಅಪ್ಪಟ ರೋಚಕತೆ ಮರಳಿ ಬಂದಂತಾಗಿದೆ. ಏಷ್ಯಾ ಕಪ್ ಕ್ರಿಕೆಟ್ ನ ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿಗಳಾದ ಎರಡೂ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿ ಪ್ರೇಕ್ಷಕರಿಗೆ ರಸದೌತಣ ನೀಡಿದರು.

ಪಾಕಿಸ್ತಾನ ಬೌಲರ್ ಗಳು ರೋಹಿತ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಎಂಬ ಟೀಂ ಇಂಡಿಯಾದ ಬಿಗ್ ಥ್ರೀ ಬ್ಯಾಟಿಗರಿಗೆ ತಯಾರಾಗಿ ಬಂದಿದ್ದರು. ಆದರೆ ರವೀಂದ್ರ ಜಡೇಜಾ-ಹಾರ್ದಿಕ್ ಪಾಂಡ್ಯ ಔಟ್ ಆಫ್ ಸಿಲಬಸ್‍ ಆಗಿ ಬಂದರು. ಒತ್ತಡದ ಸಂದರ್ಭವನ್ನು ಅದ್ಭುತವಾಗಿ ನಿಭಾಯಿಸಿದ ಜಡೇಜಾ-ಹಾರ್ದಿಕ್ ಜೋಡಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಮಾಡಿದ ಪ್ರಮಾದವನ್ನು ಸರಿಪಡಿಸಿತು.

ಪಾಕ್ ನೀಡಿದ 148 ರನ್ ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಕೆಎಲ್ ರಾಹುಲ್ ಬಂದ ಬಾಲ್ ಗೇ ಔಟಾಗುವ ಮೂಲಕ ಆಘಾತ ನೀಡಿದರು. ಆದರೆ ನಂತರ ರೋಹಿತ್ ಶರ್ಮಾ-ಕೊಹ್ಲಿ ಆಟಕ್ಕೆ ಕುದುರಿಕೊಳ್ಳುತ್ತಿರುವಾಗಲೇ ರೋಹಿತ್ 12 ರನ್ ಗೆ ಔಟಾದರು. ಆದರೆ ಕೊಹ್ಲಿ 35 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಅಚ್ಚರಿಯೆಂಬಂತೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ರವೀಂದ್ರ ಜಡೇಜಾ 29 ಎಸೆತಗಳಲ್ಲಿ 35 ರನ್ ಗಳಿಸಿದರು. ದುರದೃಷ್ಟವಶಾತ್ ಕೊನೆಯ ಓವರ್ ನಲ್ಲಿ 6 ಎಸೆತದಲ್ಲಿ 7 ರನ್ ಬೇಕಾಗಿದ್ದಾಗ ಜಡೇಜಾ ಔಟಾದರು. ಆದರೆ ಬಳಿಕ ಹಾರ್ದಿಕ್ ಪಾಂಡ್ಯ  ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವಿನ ರನ್ ಗಳಿಸಿಕೊಟ್ಟರು. ಹಾರ್ದಿಕ್ 17 ಎಸೆತಗಳಲ್ಲಿ 33 ರನ್ ಚಚ್ಚಿದ್ದು ನಿರ್ಣಾಯಕವಾಯಿತು. ಅಂತಿಮವಾಗಿ ಭಾರತ 19.4  ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿ ವಿಜಯಿಯಾಯಿತು. ಭಾರತ ರೋಚಕವಾಗಿ 5 ವಿಕೆಟ್ ಗಳ ಗೆಲುವು ಕಾಣುತ್ತಿದ್ದಂತೇ ಸ್ಟೇಡಿಯಂ ಹುಚ್ಚೆದ್ದು ಕುಣಿಯಿತು.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments