Asia Cup Cricket: ಸೂಪರ್ 4 ಹಂತದಲ್ಲಿ ಇಂದು ಟೀಂ ಇಂಡಿಯಾದ ಎದುರಾಳಿ ಯಾರು

Krishnaveni K
ಬುಧವಾರ, 24 ಸೆಪ್ಟಂಬರ್ 2025 (08:58 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಟೀಂ ಇಂಡಿಯಾ ಸೂಪರ್ 4 ಹಂತದ ಎರಡನೇ ಪಂದ್ಯವಾಡಲಿದ್ದು, ಈ ಪಂದ್ಯದಲ್ಲಿ ಟೀಂ ಇಂಡಿಯಾಗೆ ಬಾಂಗ್ಲಾದೇಶ ಎದುರಾಳಿಯಾಗಿದೆ.

ಸೂಪರ್ 4 ಹಂತದ ಮೊದಲ ಪಂದ್ಯವನ್ನು ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ಇದೀಗ ಎರಡನೇ ಪಂದ್ಯದ ಸಮಯ.

ಇಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಭಾರತದ ಪಾಲಿಗೆ ಎರಡನೇ ಸೂಪರ್ 4 ಪಂದ್ಯ ನಡೆಯಲಿದೆ. ಲಿಟನ್ ದಾಸ್ ನೇತೃತ್ವದ ಬಾಂಗ್ಲಾ ಪಡೆ ಈ ಬಾರಿ ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಆದರೆ ಭಾರತದ ವಿರುದ್ಧ ಬಾಂಗ್ಲಾಕ್ಕೆ ಗೆಲುವು ಅಷ್ಟು ಸುಲಭವಲ್ಲ.

ಟೀಂ ಇಂಡಿಯಾ ಬಹುತೇಕ ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸುವುದು ನಿಶ್ಚಿತವಾಗಿದೆ. ಟಾಸ್ ಗೆದ್ದ ತಂಡ ಇಲ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು. ಈ ಪಂದ್ಯವನ್ನೂ ಗೆದ್ದರೆ ಭಾರತದ ಫೈನಲ್ ಹಾದಿ ಸುಗಮವಾಗಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಮೃತಿ ಜತೆಗಿನ ಮದುವೆ ಮುಂದೂಡಿಕೆ ಬಳಿಕ ಮೊದಲ ಬಾರಿ ಪಲಾಶ್ ಮುಚ್ಚಲ್ ಕಾಣಿಸಿಕೊಂಡಿದ್ದು ಹೀಗೆ

Video: ಕರೆದರೂ ಕೇಳದೇ ಕೇಕ್ ಕಟಿಂಗ್ ಸೆಲೆಬ್ರೇಷನ್ ನಿಂದ ದೂರ ಹೋದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಪಾಲಿಗೆ ಕೆಎಲ್ ರಾಹುಲ್ ಲಕ್ಕಿ ಚಾರ್ಮ್: ಯಾಕೆ ಇಲ್ಲಿದೆ ನೋಡಿ ವಿವರ

Video: ಜೋರಾಗ್ ಓಡ್ ಮಗಾ...ಮೈದಾನದಲ್ಲಿ ಪ್ರಸಿದ್ಧಗೆ ಕನ್ನಡದಲ್ಲೇ ಆರ್ಡರ್ ಮಾಡಿದ ಕೆಎಲ್ ರಾಹುಲ್

ಚೆನ್ನಾಗಿ ಆಡಿದ್ರೂ ಖುಷಿಯಿಲ್ವಾ: ಪಂದ್ಯದ ಬಳಿಕ ರೋಹಿತ್ ಶರ್ಮಾ ಜೊತೆ ಗಂಭೀರ್ ಕಿತ್ತಾಟ Viral video

ಮುಂದಿನ ಸುದ್ದಿ
Show comments