ದುಬೈ: ಪ್ರತಿಷ್ಠಿತ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಆತಿಥ್ಯವನ್ನು ಈ ಬಾರಿ ಪಾಕಿಸ್ತಾನ ಕ್ರಿಕೆಟ್ ವಹಿಸಿಕೊಂಡಿದೆ. ಆದರೆ ಪಾಕ್ ನಿಂದ ಟೂರ್ನಮೆಂಟ್ ಶಿಫ್ಟ್ ಆಗುವ ಸಾಧ‍್ಯತೆಯಿದೆ.
ಪಾಕಿಸ್ತಾನದಲ್ಲಿ ಟೂರ್ನಿ ನಡೆದರೆ ಭಾರತ ಪಾಲ್ಗೊಳ್ಳುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿತ್ತು. ಪಾಕಿಸ್ತಾನದಲ್ಲಿ ಭದ್ರತಾ ಸಮಸ್ಯೆಯಿದೆ. ಹೀಗಾಗಿ ಭಾರತ ಆಡುವ ಪಂದ್ಯಗಳನ್ನು ಯುಎಇನಲ್ಲಿ ನಡೆಸಲು ಈ ಮೊದಲು ಯೋಜನೆ ಹಾಕಲಾಗಿತ್ತು.
ಆದರೆ ಈಗ ಪಾಕಿಸ್ತಾನದಿಂದಲೇ ಟೂರ್ನಮೆಂಟ್ ಶ್ರೀಲಂಕಾಗೆ ಶಿಫ್ಟ್ ಆಗಲಿದೆ ಎನ್ನಲಾಗಿದೆ. ಸೆಪ್ಟೆಂಬರ್ ನಲ್ಲಿ ವಿಪರೀತ ತಾಪಮಾನವಿರುವ ಕಾರಣ ಯುಎಇನಲ್ಲಿ ಟೂರ್ನಮೆಂಟ್ ನಡೆಸಲು ಸಾಧ‍್ಯವಿಲ್ಲ. ಹೀಗಾಗಿ ಲಂಕಾಗೆ ಶಿಫ್ಟ್ ಆಗುವ ಸಾಧ‍್ಯತೆಯಿದೆ.