ಮುಂಬೈ: ಐಪಿಎಲ್ 2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಸೋಲು ಕಂಡಿದೆ.  ಮುಂಬೈ ಎದುರು 6 ವಿಕೆಟ್ ಗಳ ಸೋಲು ಅನುಭವಿಸಿದೆ.
									
			
			 
 			
 
 			
			                     
							
							
			        							
								
																	ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿಗೆ ಎಂದಿನಂತೇ ಕೈ ಹಿಡಿದಿದ್ದ ಗ್ಲೆನ್ ಮ್ಯಾಕ್ಸ್ ವೆಲ್-ಫಾ ಡು ಪ್ಲೆಸಿಸ್ ಜೋಡಿ ಇಬ್ಬರೂ ಶತಕದ ಜೊತೆಯಾಟವಾಡಿದ್ದರಿಂದ ಆರ್ ಸಿಬಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಲು ಸಾಧ‍್ಯವಾಯಿತು. ಮ್ಯಾಕ್ಸಿ 68, ಫಾ ಡು ಪ್ಲೆಸಿಸ್ 65 ರನ್ ಗಳಿಸಿತು. ಆದರೆ ಇವರಿಬ್ಬರ ವಿಕೆಟ್ ಬಿದ್ದ ಮೇಲೆ ಕೊನೆಯ 7 ಓವರ್ ಗಳಲ್ಲಿ ಆರ್ ಸಿಬಿ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದರಿಂದ 20-30 ರನ್ ಕಡಿಮೆಯಾಯಿತು.
									
										
								
																	ಈ ಮೊತ್ತ ಬೆನ್ನತ್ತಿದ ಮುಂಬೈ ಇಶಾನ್ ಕಿಶನ್ ಸ್ಪೋಟಕ ಆರಂಭ ನೀಡಿದರು. ಅವರು 42 ರನ್ ಗಳಿಸಿದರು. ಆದರೆ ನಾಯಕ ರೋಹಿತ್ ಶರ್ಮಾ ಮತ್ತೆ ವೈಫಲ್ಯಕ್ಕೊಳಗಾಗಿ 7 ರನ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಸೂರ್ಯಕುಮಾರ್ ಯಾದವ್ ಬಿರುಸಿನ ಆಟವಾಡಿ 35 ಎಸೆತಗಳಿಂದ 83 ರನ್ ಗಳಿಸುವ ಮೂಲಕ ಮುಂಬೈ ಗೆಲುವು ಸುಲಭವಾಗಿಸಿದರು.  ಅವರಿಗೆ ತಕ್ಕ ಸಾಥ್ ನೀಡಿದ ನೇಹಲ್ ವಧೇರಾ ಅಜೇಯ 52 ರನ್ ಗಳಿಸಿದರು. ಇದರೊಂದಿಗೆ ಮುಂಬೈ 16.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿ ಗೆಲುವು  ಕಂಡಿತು.