Asia Cup Cricket: ಪಾಕ್‌ ವಿರುದ್ಧ ಭಾರತವೇ ಗೆಲ್ಲುವ ನೆಚ್ಚಿನ ತಂಡ, ದಾಖಲೆ ಇಲ್ಲಿದೆ

Sampriya
ಭಾನುವಾರ, 14 ಸೆಪ್ಟಂಬರ್ 2025 (11:07 IST)
ದುಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಪಂದ್ಯಕ್ಕೆ ದುಬೈನ ಅಂತರರಾಷ್ಟ್ರೀಯ ಕ್ರೀಡಾಂಗಣ ಸಜ್ಜಾಗಿದೆ. ಏಪ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಇಂದು ನಡೆಯುವ ಎ ಗುಂಪಿನ ಪಂದ್ಯದಲ್ಲಿ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ. 

ಭಾರತ ಮತ್ತು ಪಾಕ್‌ ನಡುವಿನ ಪಂದ್ಯಕ್ಕೆ ಸಾಕಷ್ಟು ವಿರೋಧವಿದ್ದರೂ ಪಂದ್ಯ ಇಂದು ನಡೆಯಲಿದೆ. ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಆದರೆ, ಈ ಹಿಂದಿನ ದಾಖಲೆಯ ಪ್ರಕಾರ ಭಾರತವೇ ಪಾರಮ್ಯ ಸಾಧಿಸುವ ವಿಶ್ವಾಸದಲ್ಲಿದೆ.

‌ಪಾಕಿಸ್ತಾನ ತಂಡಕ್ಕೆ ಹೇಳಿಸಿದರೆ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಭಾರತವೇ ಬಲಿಷ್ಠವಾಗಿದೆ. ಶುಭ್‌ಮನ್‌ ಗಿಲ್‌, ಅಭಿಷೇಕ್‌ ಶರ್ಮಾ, ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್, ತಿಲಕ್‌ ವರ್ಮಾ, ಪಾಂಡ್ಯ, ಸಂಜು ಬ್ಯಾಟಿಂಗ್‌ ಬಲವಾದರೆ, ಬೌಲಿಂಗ್‌ನಲ್ಲಿ ಕುಲ್‌ದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಅಕ್ಷರ್‌ ಪಟೇಲ್‌ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. 

ಪಾಕ್‌ ತಂಡದಲ್ಲಿ ಹೊಸಮುಖಗಳೇ ಅಧಿಕವಾಗಿದೆ. ಯುವ ಆಟಗಾರರ ಮೇಲೆ ಹೆಚ್ಚಿನ ವಿಶ್ವಾಸ ಇಟ್ಟುಕೊಟ್ಟಿದೆ. 
ಸೈಮ್‌ ಅಯೂಬ್, ಹಸನ್ ನವಾಜ್‌, ಫಖರ್‌ ಜಮಾನ್‌, ಮೊಹಮ್ಮದ್‌ ಹಾರಿಸ್‌ರನ್ನು ಹೆಚ್ಚಾಗಿ ಅವಲಂಬಿಸಿದೆ.

ಭಾರತ-ಪಾಕಿಸ್ತಾನ ಏಷ್ಯಾಕಪ್‌(ಏಕದಿನ, ಟಿ20 ಸೇರಿ)ನಲ್ಲಿ 19 ಬಾರಿ ಮುಖಾಮುಖಿಯಾಗಿವೆ. 10ರಲ್ಲಿ ಭಾರತ, 6ರಲ್ಲಿ ಪಾಕಿಸ್ತಾನ ಗೆದ್ದಿದೆ. 3 ಪಂದ್ಯ ರದ್ದುಗೊಂಡಿವೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದ ತಾಜಾ ಪಿಚ್‌ ತಂಡಗಳನ್ನು ಸ್ವಾಗತಿಸಿದೆ. ಟಿ20 ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕ್‌ ಒಟ್ಟು 13 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಭಾರತ 9 ಬಾರಿ ಗೆದ್ದರೆ, ಮೂರು ಬಾರಿ ಪಾಕಿಸ್ತಾನ ಜಯಿಸಿದೆ. ಒಂದು ಪಂದ್ಯ ಟೈ ಆಗಿದೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾಗೆ ಅವಮಾನಕರ ಪದ ಬಳಸಿದ್ರಾ ಜಸ್ಪ್ರೀತ್ ಬುಮ್ರಾ video

ವಿರಾಟ್ ಕೊಹ್ಲಿ ಶತಕದ ಸ್ಟೈಲ್ ಕಾಪಿ ಮಾಡಿದ ಬಾಬರ್ ಅಜಮ್: ಸ್ವಂತಿಕೆನೇ ಇಲ್ವಾ ಎಂದ ನೆಟ್ಟಿಗರು video

IND vs SA: ಟೀಂ ಇಂಡಿಯಾ ವಿರುದ್ಧ ಜುಜುಬಿ ಮೊತ್ತಕ್ಕೆ ಆಲೌಟ್ ಆದ ದಕ್ಷಿಣ ಆಫ್ರಿಕಾ

IND vs SA: ಟಾಸ್ ಗೆದ್ದ ದಕ್ಷಿಣ ಆಫ್ರಿಕಾ, ಬೆಸ್ಟ್ ಟೀಂ ಕಣಕ್ಕಿಳಿಸಿದ ಟೀಂ ಇಂಡಿಯಾ

ಮೊಹಮ್ಮದ್ ಶಮಿ ಯಾಕೆ ಆಯ್ಕೆ ಮಾಡಿಲ್ಲ ಎಂದು ಕೇಳಿದ್ದಕ್ಕೆ ಶುಭಮನ್ ಗಿಲ್ ಉತ್ತರ ಹೀಗಿತ್ತು

ಮುಂದಿನ ಸುದ್ದಿ
Show comments