ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲಿ ಟಿ20 ಸ್ಪೆಷಲಿಸ್ಟ್ ಬೌಲರ್ ಅರ್ಷ್ ದೀಪ್ ಸಿಂಗ್ ರನ್ನು ತಂಡ ಆಡುವ ಬಳಗದಿಂದ ಹೊರಗಿಟ್ಟಿತ್ತು. ಇದಕ್ಕೆ ಕಾರಣ ಇಲ್ಲಿದೆ.
ಯುಎಇ ವಿರುದ್ಧ ಮೊದಲ ಪಂದ್ಯವನ್ನು ಭಾರತ ಸುಲಭವಾಗಿ 9 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಬೌಲರ್ ಗಳಂತೂ ಪ್ರಚಂಡ ಪ್ರದರ್ಶನ ತೋರಿದ್ದರು. ಬ್ಯಾಟಿಂಗ್ ಕೂಡಾ ಏನೂ ಕಡಿಮೆಯಿರಲಿಲ್ಲ. ಭಾರತ ಈ ಪಂದ್ಯಕ್ಕೆ 8 ಬ್ಯಾಟಿಗರನ್ನು ಹೊಂದಿತ್ತು.
ಭಾರತ ತಂಡದಲ್ಲಿ ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್ ರೂಪದಲ್ಲಿ ಆಲ್ ರೌಂಡರ್ ಗಳಿರುವುದು ಪ್ಲಸ್ ಪಾಯಿಂಟ್. ಇಲ್ಲಿನ ಪಿಚ್ ಗಳು ಸ್ಪಿನ್ನರ್ ಗಳಿಗೆ ಸಹಕರಿಸುವುದರಿಂದ ಜಸ್ಪ್ರೀತ್ ಬುಮ್ರಾ ರೂಪದಲ್ಲಿ ಏಕೈಕ ಸ್ಪೆಷಲಿಸ್ಟ್ ವೇಗಿಯನ್ನು ಭಾರತ ಕಣಕ್ಕಿಳಿಸಿತ್ತು.
8 ಬ್ಯಾಟಿಗರನ್ನು ಹೊಂದುವುದು ಭಾರತದ ಯೋಜನೆಯಾಗಿದೆ. ಈ ಕಾರಣಕ್ಕೆ ಮೊದಲ ಪಂದ್ಯದಲ್ಲಿ ಟಿ20 ಸ್ಪೆಷಲಿಸ್ಟ್ ಬೌಲರ್ ಅರ್ಷ್ ದೀಪ್ ಸಿಂಗ್ ರನ್ನು ಅನಿವಾರ್ಯವಾಗಿ ಹೊರಗಿಡಲಾಯಿತು. ಇದೀಗ ಪಾಕಿಸ್ತಾನ ವಿರುದ್ಧವೂ ಅರ್ಷ್ ದೀಪ್ ಕಣಕ್ಕಿಳಿಯುವುದು ಅನುಮಾನವಾಗಿದೆ.