Publish Date: Wed, 08 Aug 2018 (09:30 IST)
Updated Date: Wed, 08 Aug 2018 (09:33 IST)
ಲಂಡನ್: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಅಂಡರ್ 19 ತಂಡಕ್ಕೆ ಆಯ್ಕೆಯಾಗುವ ಮೂಲಕ ಈಗಾಗಲೇ ಕ್ರಿಕೆಟ್ ಜಗತ್ತಿಗೆ ಪರಿಚಯವಾಗಿದ್ದಾರೆ.
ಇದೀಗ ಸಚಿನ್ ಪುತ್ರ ಅರ್ಜುನ್ ಇಂಗ್ಲೆಂಡ್ ಮಹಿಳಾ ಸ್ಟಾರ್ ಕ್ರಿಕೆಟಿಗೆ ಡ್ಯಾನಿಯಲ್ ವ್ಯಾಟ್ ಜತೆಗೆ ರೆಸ್ಟೋರೆಂಟ್ ನಲ್ಲಿ ಊಟ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವ್ಯಾಟ್ ಯಾರು ಎಂದು ನಿಮಗೆ ಗೊತ್ತೇ ಇದೆಯಲ್ಲಾ? ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿ, ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಈಕೆ. ಸದ್ಯಕ್ಕೆ ಶ್ರೀಲಂಕಾ ವಿರುದ್ಧ ಅಂಡರ್ 19 ಏಕದಿನ ಸರಣಿಗೆ ಆಯ್ಕೆಯಾಗದ ಅರ್ಜುನ್ ಸದ್ಯಕ್ಕೆ ಲಂಡನ್ ನಲ್ಲಿ ಕಾಲ ಕಳೆಯುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.