Select Your Language

Notifications

webdunia
webdunia
webdunia
webdunia

ರಾಹುಲ್ ದ್ರಾವಿಡ್ ಹಸ್ತಾಕ್ಷರದ ಸ್ಪೆಷಲ್ ಬ್ಯಾಟ್ ಬಳಸಿ ಬ್ಯಾಟ್ ಮಾಡಿದ ಅಜಿಂಕ್ಯಾ ರೆಹಾನೆ

ರಾಹುಲ್ ದ್ರಾವಿಡ್ ಹಸ್ತಾಕ್ಷರದ ಸ್ಪೆಷಲ್ ಬ್ಯಾಟ್ ಬಳಸಿ ಬ್ಯಾಟ್ ಮಾಡಿದ ಅಜಿಂಕ್ಯಾ ರೆಹಾನೆ
ಅಡಿಲೇಡ್ , ಶುಕ್ರವಾರ, 7 ಡಿಸೆಂಬರ್ 2018 (08:52 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಆಡಲೆಂದೇ ಟೀಂ ಇಂಡಿಯಾ ಉಪ ನಾಯಕ ಅಜಿಂಕ್ಯಾ ರೆಹಾನೆ ಸ್ಪೆಷಲ್ ಬ್ಯಾಟ್ ಒಂದನ್ನು ಪಡೆದಿದ್ದಾರೆ.


ಭಾರತೀಯ ಕ್ರಿಕೆಟ್ ನ ವಾಲ್ ಎಂದೇ ಪರಿಗಣಿತವಾಗಿರುವ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಸಹಿ ಉಳ್ಳ ಬ್ಯಾಟ್ ನಲ್ಲಿ ರೆಹಾನೆ ಈ ಸರಣಿಯಲ್ಲಿ ಬ್ಯಾಟ್ ಮಾಡುತ್ತಿದ್ದಾರೆ. ರೆಹಾನೆ ಬಳಸುವ ಈ ಬ್ಯಾಟ್ ನಲ್ಲಿ ದ್ರಾವಿಡ್ ಬೆಸ್ಟ್ ವಿಶಸ್ ಎಂದು ಬರೆದು ಸಹಿ ಹಾಕಿದ್ದಾರೆ.

ಈ ಟೆಸ್ಟ್ ಸರಣಿಗೆ ಮುನ್ನ ರೆಹಾನೆ ದ್ರಾವಿಡ್ ಗರಡಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಎ ತಂಡದ ಪರ ಟೆಸ್ಟ್ ಆಡಿದ್ದರು. ಆ ಸಂದರ್ಭದಲ್ಲಿ ರೆಹಾನೆ ತಮ್ಮ ಗುರು ದ್ರಾವಿಡ್ ಬಳಿಯಿಂದ ಹಸ್ತಾಕ್ಷರ ಪಡೆದಿದ್ದರು. ಏನೇ ಆದರೂ ಮೊದಲ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಮಾತ್ರ ಈ ಬ್ಯಾಟ್ ನಿಂದ ರೆಹಾನೆ ಮ್ಯಾಜಿಕ್ ಮಾಡಲಿಲ್ಲ ಎಂಬುದೇ ವಿಪರ್ಯಾಸ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ಟಾಂಗ್ ಕೊಟ್ಟರೇ ಹರ್ಭಜನ್ ಸಿಂಗ್?!