Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾ ಮಾತ್ರವಲ್ಲ, ಕೊಹ್ಲಿಯೂ ವೈಟ್ ಬಾಲ್ ಕ್ರಿಕೆಟ್ ನಿಂದ ದೂರ… ದೂರ..!

ರೋಹಿತ್ ಶರ್ಮಾ ಮಾತ್ರವಲ್ಲ, ಕೊಹ್ಲಿಯೂ ವೈಟ್ ಬಾಲ್ ಕ್ರಿಕೆಟ್ ನಿಂದ ದೂರ… ದೂರ..!
ಮುಂಬೈ , ಗುರುವಾರ, 30 ನವೆಂಬರ್ 2023 (08:30 IST)
ಮುಂಬೈ: ಏಕದಿನ ವಿಶ್ವಕಪ್ ಫೈನಲ್ ಸೋಲಿನ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ಮಾದರಿಯಿಂದ ದೂರ ಸರಿಯುವ ಚಿಂತನೆ ನಡೆಸಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿತ್ತು.

ಈಗಾಗಲೇ ರೋಹಿತ್ ಟಿ20 ಕ್ರಿಕೆಟ್ ನಿಂದ ದೂರವಿದ್ದಾರೆ. ಮುಂದಿನ ದಿನಗಳಲ್ಲಿ ಏಕದಿನ ಮಾದರಿಯಿಂದಲೂ ಹೊರಬರುವ ಸಾಧ‍್ಯತೆಯಿದೆ. ಈ ಬಗ್ಗೆ ಬಿಸಿಸಿಐ ಆಯ್ಕೆಗಾರರು ರೋಹಿತ್ ಜೊತೆ ಚರ್ಚೆ ನಡೆಸಲಿದ್ದಾರೆ.

ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡಾ ರೋಹಿತ್ ಹಾದಿ ಹಿಡಿಯುವ ಸಾಧ‍್ಯತೆಯಿದೆ. ರೋಹಿತ್ ರಂತೇ ಕೊಹ್ಲಿ ಕೂಡಾ ವೈಟ್ ಬಾಲ್ ಕ್ರಿಕೆಟ್ ನಿಂದ ನಿಧಾನವಾಗಿ ದೂರ ಸರಿಯಲಿದ್ದು, ಯುವಕರಿಗೆ ಅವಕಾಶ ಮಾಡಿಕೊಡಲಿದ್ದಾರೆ.

ಮುಂಬರುವ ದ.ಆಫ್ರಿಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯಲ್ಲಿ ಕೊಹ್ಲಿ ಪಾಲ್ಗೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಮಾತ್ರ ಮುಂದುವರಿದರೂ ಅಚ್ಚರಿಯಿಲ್ಲ. ಡಿಸೆಂಬರ್, ಜನವರಿಯಲ್ಲಿ ಕೊಹ್ಲಿ ಸಾಮಾನ್ಯವಾಗಿ ತಮ್ಮ ಪತ್ನಿಯ ಜೊತೆ ಪ್ರವಾಸ ತೆರಳುತ್ತಾರೆ. ಈ ಬಾರಿಯೂ ಅವರು ಆಫ್ರಿಕಾ ಪ್ರವಾಸ ತಪ್ಪಿಸಿ ಕುಟುಂಬದ ಜೊತೆ ಕಾಲ ಕಳೆಯಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕರ್ತವ್ಯಕ್ಕೆ ಬ್ರೇಕ್ ಹಾಕಿ ಮದುವೆಯಾದ ಕ್ರಿಕೆಟಿಗ ಮುಕೇಶ್ ಕುಮಾರ್