Select Your Language

Notifications

webdunia
webdunia
webdunia
webdunia

ಹೊಸ ಇನ್ನಿಂಗ್ಸ್‌ ಆರಂಭಿಸಿದ ಅಫ್ಗಾನ್‌ ಕ್ರಿಕೆಟರ್‌: ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶೀದ್‌

Cricketer Rashid Khan

Sampriya

ಕಾಬೂಲ್‌ , ಶುಕ್ರವಾರ, 4 ಅಕ್ಟೋಬರ್ 2024 (14:18 IST)
Photo Courtesy X
ಕಾಬೂಲ್‌: ಅಫ್ಗಾನಿಸ್ತಾನದ ಖ್ಯಾತ ಕ್ರಿಕೆಟ್ ಆಟಗಾರ ರಶೀದ್ ಖಾನ್ ಅವರು ಜೀವನದ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಅವರು ಗುರುವಾರ ‌ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಾಬೂಲ್‌ನ ಇಂಪೀರಿಯಲ್ ಕಾಂಟಿನೆಂಟಲ್ ಹೋಟೆಲ್‌ನಲ್ಲಿ ಅಫ್ಗಾನಿಸ್ತಾನದ ಸಂಪ್ರದಾಯದ ಪ್ರಕಾರ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.
ಈ ವೇಳೆ ಅಫ್ಗಾನಿಸ್ತಾನ ನ್ಯಾಷನಲ್ ಕ್ರಿಕೆಟ್ ಟೀಂ ಆಟಗಾರರು, ಗಣ್ಯರು ಹಾಜರಿದ್ದು ಶುಭ ಕೋರಿದ್ದಾರೆ.

ವಿಶೇಷವೆಂದರೆ ಇದೇ ವೇಳೆ ರಶೀದ್ ಖಾನ್ ಅವರ ಜೊತೆಯೇ ರಶೀದ್ ಅವರ ಸಹೋದರ ಜಖೀವುಲ್ಲಾ ಖಾನ್ ಹಾಗೂ ಇಬ್ಬರು ಸೋದರಳಿಯರು ಮದುವೆಯಾಗಿದ್ದಾರೆ. ಒಂದೇ ವೇದಿಕೆಯಲ್ಲಿ ನಾಲ್ವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಫ್ಗಾನಿಸ್ತಾನ ಕ್ರಿಕೆಟ್ ಅಸೋಸಿಯೇಷನ್ ಮದುವೆಯ ಫೋಟೊಗಳನ್ನು ಹಂಚಿಕೊಂಡು ಎಕ್ಸ್‌ನಲ್ಲಿ ಶುಭಕೋರಿದೆ.

ರಶೀದ್ ಖಾನ್ ಅವರ ನಾಯಕತ್ವದಲ್ಲಿ ಅಫ್ಗಾನಿಸ್ತಾನ ತಂಡವು ಏಕದಿನ ವಿಶ್ವಕಪ್‌ ಮತ್ತು ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಬಾಂಗ್ಲಾದೇಶ ಟಿ20 ಸರಣಿ ಯಾವಾಗ ಶುರು, ಎಲ್ಲಿ ಇಲ್ಲಿದೆ ಡೀಟೈಲ್ಸ್