Select Your Language

Notifications

webdunia
webdunia
webdunia
webdunia

ನಾನು ಹೇಳೋವರೆಗೂ ನಂಬಬೇಡಿ: ಸುಳ್ಳು ಸುದ್ದಿ ಬಗ್ಗೆ ಗರಂ ಆದ ಕ್ರಿಕೆಟಿಗ ಮೊಹಮ್ಮದ್ ಶಮಿ

Mohammed Shami

Krishnaveni K

ಕೋಲ್ಕತ್ತಾ , ಗುರುವಾರ, 3 ಅಕ್ಟೋಬರ್ 2024 (16:28 IST)
ಕೋಲ್ಕತ್ತಾ: ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ತಮ್ಮ ಬಗ್ಗೆ ಹರಡಿರುವ ಸುಳ್ಳು ಸುದ್ದಿ ಬಗ್ಗೆ ಗರಂ ಆಗಿದ್ದು, ನಾನು ಹೇಳುವವರೆಗೂ ಯಾವುದನ್ನೂ ನಂಬಬೇಡಿ ಎಂದು ಖಡಕ್ ಆಗಿ ಹೇಳಿದ್ದಾರೆ.

ಮೊಹಮ್ಮದ್ ಶಮಿ ಕಳೆದ ಏಕದಿನ ವಿಶ್ವಕಪ್ ಬಳಿಕ ಗಾಯದಿಂದಾಗಿ ಕ್ರಿಕೆಟ್ ನಿಂದ ದೂರವೇ ಇದ್ದಾರೆ. ಇದರ ನಡುವೆ ಅವರು ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದು, ಬೌಲಿಂಗ್ ಆರಂಭಿಸಿದ್ದಾರೆ. ಆದರೆ ಇನ್ನೂ ಟೀಂ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಿಲ್ಲ.

ಇದರ ನಡುವೆ ಅವರಿಗೆ ಮೊಣಕಾಲಿನ ಸಮಸ್ಯೆ ಕಾಣಿಸಿಕೊಂಡಿದೆ, ಮುಂಬರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಅಲಭ್ಯರಾಗಲಿದ್ದಾರೆ ಎಂದು ಕೆಲವು ಮಾಧ್ಯಮಗಳು ನಿನ್ನೆಯಿಡೀ ವರದಿ ಮಾಡಿದ್ದವು. ಈ ವರದಿ ಮೊಹಮ್ಮದ್ ಶಮಿ ಗಮನಕ್ಕೂ ಬಂದಿದೆ. ಇದರ ಬಗ್ಗೆ ಅವರು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

ಇದೆಲ್ಲಾ ಸುಳ್ಳು ಸುದ್ದಿ, ನಾನು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಇರಲ್ಲ ಎಂದು ಇದುವರೆಗೆ ಹೇಳಿಲ್ಲ. ನಾನು ಅಥವಾ ಬಿಸಿಸಿಐ ಅಧಿಕೃತವಾಗಿ ಹೇಳುವವರೆಗೂ ಯಾವುದೇ ಸುಳ್ಳು ಸುದ್ದಿಗಳನ್ನು ನಂಬಬೇಡಿ. ನಾನು ಈಗಾಗಲೇ ಟ್ರೈನಿಂಗ್ ಆರಂಭಿಸಿದ್ದೇನೆ. ಕಮ್ ಬ್ಯಾಕ್ ಮಾಡಲಿದ್ದೇನೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಾಜಿ ಕ್ರಿಕೆಟಿಗ ಅಜರುದ್ದೀನ್​ಗೆ ಇಡಿ ನೋಟಿಸ್​