ಯುವತಿಯೊಬ್ಬಳ ಜತೆ ಕಾಣಿಸಿಕೊಂಡ ಬೆನ್ನಲ್ಲೇ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ರಶೀದ್ ಖಾನ್ ತಮ್ಮ ಸಂಬಂಧದ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ.
ಅಫ್ಘಾನ್ ಸಾಂಪ್ರದಾಯಿಕ ಉಡುಗೆಯಲ್ಲಿ ಮಹಿಳೆಯ ಪಕ್ಕದಲ್ಲಿ ರಶೀದ್ ಖಾನ್ ಕುಳಿತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇದು ಎರಡನೇ ಮದುವೆಯ ಬಗ್ಗೆ ಊಹಾಪೋಹಗಳು ಹರಿದಾಡಿತ್ತು.
ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಖಾನ್ ಅವರ ಎರಡನೇ ಪತ್ನಿ ಅಫ್ಘಾನ್ ಮಾಡೆಲ್ ಎಂದು ಬರೆದುಕೊಂಡಿತ್ತು. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ.
ಫೋಟೋದಲ್ಲಿರುವ ಮಹಿಳೆ ನಿಜಕ್ಕೂ ತನ್ನ ಪತ್ನಿಯೇ ಎಂದು ಲೆಗ್ ಸ್ಪಿನ್ನರ್ ಇದೀಗ ಸ್ಪಷ್ಟಪಡಿಸಿದ್ದಾರೆ. ಅವರು ಎರಡನೇ ಬಾರಿಗೆ ಮದುವೆಯಾಗಿರುವುದನ್ನು ಖಚಿತಪಡಿಸಿದರು.
ಅವರ ಮೊದಲ ಮದುವೆ ಅಕ್ಟೋಬರ್ 2024 ರಲ್ಲಿ ನಡೆಯಿತು. ಇದಿಗ ರಶೀದ್ ತನ್ನ ಎರಡನೇ ಮದುವೆ ಆಗಸ್ಟ್ 2, 2025 ರಂದು ನಡೆಯಿತು ಎಂದು ಹೇಳಿದರು.
"ಆಗಸ್ಟ್ 2, 2025 ರಂದು, ನಾನು ನನ್ನ ಜೀವನದ ಹೊಸ ಮತ್ತು ಅರ್ಥಪೂರ್ಣ ಅಧ್ಯಾಯವನ್ನು ಪ್ರಾರಂಭಿಸಿದೆ, ನಾನು ನನ್ನ ನಿಕ್ಕಾವನ್ನು ಮಾಡಿದ್ದೇನೆ ಮತ್ತು ನಾನು ಯಾವಾಗಲೂ ಆಶಿಸುವ ಪ್ರೀತಿ, ಶಾಂತಿ ಮತ್ತು ಪಾಲುದಾರಿಕೆಯನ್ನು ಸಾಕಾರಗೊಳಿಸುವ ಮಹಿಳೆಯನ್ನು ಮದುವೆಯಾಗಿದ್ದೇನೆ" ಎಂದು ಖಾನ್ Instagram ನಲ್ಲಿ ಬರೆದಿದ್ದಾರೆ.