Webdunia - Bharat's app for daily news and videos

Install App

ಕೊಹ್ಲಿ-ಅನುಷ್ಕಾ ಎರಡನೇ ಮಗುವಿನ ವಿಚಾರದಲ್ಲಿ ಉಲ್ಟಾ ಹೊಡೆದ ಎಬಿಡಿ ವಿಲಿಯರ್ಸ್

Krishnaveni K
ಶುಕ್ರವಾರ, 9 ಫೆಬ್ರವರಿ 2024 (12:46 IST)
Photo Courtesy: Twitter
ಮುಂಬೈ: ಇತ್ತೀಚೆಗಷ್ಟೇ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗೆ ಎರಡನೇ ಮಗುವಿನ  ನಿರೀಕ್ಷೆಯಲ್ಲಿದ್ದಾರೆ ಎಂದು ಬಹಿರಂಗಪಡಿಸಿದ್ದ ಎಬಿಡಿ ವಿಲಿಯರ್ಸ್ ಈಗ ತಮ್ಮ ಹೇಳಿಕೆ ವಿಚಾರದಲ್ಲಿ ಉಲ್ಟಾ ಹೊಡೆದಿದ್ದಾರೆ.

ಯೂ ಟ್ಯೂಬ್ ಸಂದರ್ಶನವೊಂದರಲ್ಲಿ ಎಬಿಡಿ ಇತ್ತೀಚೆಗೆ ಕೊಹ್ಲಿ ಪದೇ ಪದೇ ಟೀಂ ಇಂಡಿಯಾದಿಂದ ಗೈರಾಗುತ್ತಿರುವುದಕ್ಕೆ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದು ಕಾರಣ ಎಂದಿದ್ದರು. ಕೊಹ್ಲಿ ಮತ್ತು ಎಬಿಡಿ ನಡುವಿನ ಗೆಳೆತನ ಎಲ್ಲರಿಗೂ ಗೊತ್ತು. ಆರ್ ಸಿಬಿ ತಂಡದ ಈ ಕುಚಿಕು ಗೆಳೆಯ ಕೊಹ್ಲಿ ಬಗ್ಗೆ ಇಂತಹದ್ದೊಂದು ಹೇಳಿಕೆ ನೀಡಿದಾಗ ಎಲ್ಲರೂ ಇದನ್ನು ನಿಜವೆಂದು ಖಚಿತಪಡಿಸಿಕೊಂಡಿದ್ದರು.

ಯಾಕೆಂದರೆ ಇದಕ್ಕೆ ಮೊದಲು ಅನುಷ್ಕಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆಂಬ ಸುದ್ದಿ ಜೋರಾಗಿ ಓಡಾಡುತ್ತಿತ್ತು. ಆದರೆ ಇದರ ಬಗ್ಗೆ ಎಲ್ಲೂ ಅಧಿಕೃತ ಮಾಹಿತಿ ಇರಲಿಲ್ಲ. ಆದರೆ ಎಬಿಡಿ ಇಂತಹದ್ದೊಂದು ಹೇಳಿಕೆ ನೀಡಿ ಕೊಹ್ಲಿ ದಂಪತಿ ಇದುವರೆಗೆ ಗೌಪ್ಯವಾಗಿಟ್ಟಿದ್ದ ಮಾಹಿತಿ ಹೊರಬಂತು ಎಂದು ಎಲ್ಲೆಡೆ ವೈರಲ್ ಆಯಿತು.

ಇದೀಗ ಎಬಿಡಿ ತಮ್ಮ ಹೇಳಿಕೆ ವೈರಲ್ ಆದ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ‘ಎಲ್ಲರಿಗೂ ಕುಟುಂಬವೇ ಆದ್ಯತೆಯಾಗಿರುತ್ತದೆ. ಆದರೆ ಆ ಸಂದರ್ಶನದಲ್ಲಿ ನಾನು ದೊಡ್ಡ ತಪ್ಪು ಮಾಡಿದೆ. ತಪ್ಪಾದ ಮಾಹಿತಿಯನ್ನು ಹಂಚಿಕೊಂಡೆ. ಯಾರಿಗೂ ಏನಾಗುತ್ತಿದೆ ಎಂದು ಗೊತ್ತಿಲ್ಲ. ನಾನು ಆತನಿಗೆ ಶುಭಾಶಯವನ್ನಷ್ಟೇ ಹೇಳಬಲ್ಲೆ’ ಎಂದಿದ್ದಾರೆ. ಆ ಮೂಲಕ ತಮ್ಮ ಮೊದಲಿನ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Bengaluru Stampede: ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರ್ಟ್‌ ಮೆಟ್ಟಿಲೇರಿದ RCB

R Ashwin video: ಮಹಿಳಾ ಅಂಪಾಯರ್ ಮೇಲೆ ಆರ್ ಅಶ್ವಿನ್ ರೋಷಾವೇಷ

IPL 2026: ಟ್ರೋಫಿ ಗೆದ್ದ ಬೆನ್ನಲ್ಲೇ ಆರ್ ಸಿಬಿ ಐಪಿಎಲ್ ನಿಂದ ಬ್ಯಾನ್

ಕ್ರಿಕೆಟಿಗ ರಿಂಕು ಸಿಂಗ್‌ ನಿಶ್ಚಿತಾರ್ಥ: ಕೈ ಹಿಡಿಯಲಿರುವ ಯುವತಿ ಹಿನ್ನೆಲೆ ಕೇಳಿದ್ರೆ ಶಾಕ್ ಆಗ್ತೀರಾ

French Open: ಯಾನಿಕ್‌ ಸಿನ್ನರ್‌- ಕಾರ್ಲೋಸ್‌ ಅಲ್ಕರಾಜ್‌ ಪೈಪೋಟಿಯಲ್ಲಿ ಯಾರಿಗೆ ಒಲಿಯಲಿದೆ ಫ್ರೆಂಚ್‌ ಓಪನ್‌ ಕಿರೀಟ

ಮುಂದಿನ ಸುದ್ದಿ
Show comments