Select Your Language

Notifications

webdunia
webdunia
webdunia
webdunia

2019 ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಟೀಂ ಇಂಡಿಯಾದ ಮೊದಲ ಎದುರಾಳಿ ಯಾರು ಗೊತ್ತಾ?

2019 ವಿಶ್ವಕಪ್ ಕ್ರಿಕೆಟ್
ಕೋಲ್ಕೊತ್ತಾ , ಬುಧವಾರ, 25 ಏಪ್ರಿಲ್ 2018 (07:58 IST)
ಕೋಲ್ಕೊತ್ತಾ: 2019 ರ ವಿಶ್ವಕಪ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟಗೊಂಡಿದ್ದು, ಭಾರತ ಮೊದಲ ಪಂದ್ಯವನ್ನು ದ.ಆಫ್ರಿಕಾ ವಿರುದ್ಧ ಜೂನ್ 5 ರಂದು ಆಡಲಿದೆ.

2019 ರ ವಿಶ್ವಕಪ್ ಪಂದ್ಯಾವಳಿ ಮೇ 30 ರಿಂದ ಜುಲೈ 14 ರವರೆಗೆ ಇಂಗ್ಲೆಂಡ್ ನಲ್ಲಿ ನಡೆಯಲಿದೆ. ಹೀಗಾಗಿ ಮುಂದಿನ ವರ್ಷ ಐಪಿಎಲ್ ಪಂದ್ಯಾವಳಿ ಬೇಗನೇ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

ಲೋಧಾ ಸಮಿತಿ ಶಿಫಾರಸ್ಸಿನ ಅನ್ವಯ ವಿಶ್ವಕಪ್ ಮತ್ತು ಐಪಿಎಲ್ ಪಂದ್ಯಾವಳಿಗೆ 15 ದಿನಗಳ ಬಿಡುವು ಇರಲೇಬೇಕು. ಹೀಗಾಗಿ ಮೇ 15 ರೊಳಗೆ ಐಪಿಎಲ್ ಪಂದ್ಯಾವಳಿ ಮುಕ್ತಾಯವಾಗಬಹುದು.

ಜೂನ್ 16 ರಂದು ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಇದೇ ಮೊದಲ ಬಾರಿಗೆ ಐಸಿಸಿ ಕೂಟದ ಆರಂಭಿಕ ಪಂದ್ಯದಲ್ಲೇ ಈ ಎರಡೂ ತಂಡಗಳು ಮುಖಾಮುಖಿಯಾಗುತ್ತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಈ ಆಟಗಾರ ಆರೆಂಜ್ ಕ್ಯಾಪ್ ತೊಡಲು ನಾಲಾಯಕ್ ಎಂದ ವಿನೋದ್ ಕಾಂಬ್ಳಿ