Publish Date: Wed, 03 Jun 2020 (11:18 IST)
Updated Date: Wed, 03 Jun 2020 (11:19 IST)
ನವದೆಹಲಿ: ಕೊರೋನಾ ಬಳಿಕ ಸಿನಿಮಾ ಥಿಯೇಟರ್ ತೆರೆಯಲು ಒಪ್ಪಿಗೆ ನೀಡಬೇಕೇ ಬೇಡವೇ ಎಂಬ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದ್ದರೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವೇಡ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಕಾಶ್ ಜಾವೇಡ್ಕರ್ ಇಂದು ಥಿಯೇಟರ್ ಮಾಲಿಕರು, ನಿರ್ಮಾಪಕರು ಸೇರಿದಂತೆ ಸಿನಿಮಾ ಮಂದಿಯೊಂದಿಗೆ ಸದ್ಯದಲ್ಲೇ ವಿಡಿಯೋ ಕಾನ್ಫರೆನ್ಸ್ ನಡೆಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಹಾಗಿದ್ದರೂ ಈ ಜೂನ್ ನಲ್ಲಿ ಪರಿಸ್ಥಿತಿ ಅವಲೋಕಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಹೀಗಾಗಿ ಸದ್ಯದಲ್ಲೇ ಥಿಯೇಟರ್ ತೆರೆಯಲು ಒಪ್ಪಿಗೆ ಸಿಗುವುದು ಅನುಮಾನವೇ.