ಲಾಕ್ ಡೌನ್ ಮುಂದುವರಿಸುವ ಬಗ್ಗೆ ಜನರ ಅಭಿಪ್ರಾಯವೇನು?

Webdunia
ಮಂಗಳವಾರ, 12 ಮೇ 2020 (09:20 IST)
ಬೆಂಗಳೂರು: ಲಾಕ್ ಡೌನ್ ಮುಂದುವರಿಸಬೇಕೋ ಬೇಡವೋ ಎಂಬ ಬಗ್ಗೆ ಜನರು ಈಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
 

 

ಲಾಕ್ ಡೌನ್ ಮುಂದುವರಿಸುವ ಬಗ್ಗೆ ನಮ್ಮನ್ನು ಆಳುವ ನಾಯಕರಿಗೆ ಒಲವಿದೆ. ಇದಕ್ಕೆ ಕೆಲವು ವರ್ಗದ ಜನರೂ ಬೆಂಬಲ ನೀಡುತ್ತಿದ್ದಾರೆ. ಆದರೆ ಮಧ‍್ಯಮ ವರ್ಗದವರು ಮಾತ್ರ ಆಸಕ್ತಿ ತೋರುತ್ತಿಲ್ಲ.

ಯಾಕೆಂದರೆ ದುಡಿದು ತಿನ್ನುವ ವರ್ಗಕ್ಕೆ ಲಾಕ್ ಡೌನ್ ಎಂದು ಘೋಷಿಸಿ ಅಲ್ಪಸ್ವಲ್ಪ ಸಡಿಲಿಕೆ ಮಾಡುತ್ತಿರುವುದರಿಂದ ಭಾರೀ ಹಿನ್ನಡೆಯಾಗಿದೆ. ಲಾಕ್ ಡೌನ್ ಮಾಡುವುದಿದ್ದರೆ ಎರಡು ವಾರ ಕಂಪ್ಲೀಟ್ ಲಾಕ್ ಡೌನ್ ಮಾಡಲಿ. ಒಬ್ಬ ಮನುಷ್ಯನಿಗೂ ಮನೆಯಿಂದ ಹೊರ ಬರಲು ಅವಕಾಶ ಕೊಡದಂತೆ ಬಿಗಿಗೊಳಿಸಿ. ಅದರ ಬದಲು ಲಾಕ್ ಡೌನ್ ಎಂದು ಘೋಷಿಸಿ ಮದ್ಯ ಮಾರಾಟಕ್ಕೆ ಅವಕಾಶ ಕೊಡುವುದು, ಅಂಗಡಿ ತೆರೆಯಲು ಅವಕಾಶ ಕೊಡುವುದು, ಸಂಚಾರಕ್ಕೆ ಅವಕಾಶ ಕೊಡುವುದು.. ಇತ್ಯಾದಿ ಮಾಡುವುದರಿಂದ ಕೊರೋನಾ ನಿಯಂತ್ರಣವಂತೂ ಆಗುತ್ತಿಲ್ಲ. ಹಾಗಿದ್ದ ಮೇಲೆ ಲಾಕ್ ಡೌನ್ ಮುಂದುವರಿಸುವುದರಲ್ಲಿ ಅರ್ಥವಿದೆಯೇ ಎಂದು ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಮುಂದಿನ ಸುದ್ದಿ
Show comments