Publish Date: Tue, 12 May 2020 (09:18 IST)
Updated Date: Tue, 12 May 2020 (09:20 IST)
ಮಂಗಳೂರು: ಕೇರಳದ ಒಟ್ಟಾರೆ ಸೋಂಕಿತರ ಸಂಖ್ಯೆಗಿಂತಲೂ ಅಧಿಕ ಸೋಂಕಿತರನ್ನು ಹೊಂದಿದ್ದ ಕುಖ್ಯಾತಿ ಕಾಸರಗೋಡು ಜಿಲ್ಲೆಯದಾಗಿತ್ತು. ಆದರೆ ಈಗ ಈ ಜಿಲ್ಲೆ ಹಸಿರುವಲಯ ಸೇರಿಕೊಂಡಿದೆ.
ಅತೀ ಹೆಚ್ಚು ಸೋಂಕಿತರನ್ನು ಹೊಂದಿದ್ದ ಕಾಸರಗೋಡು ಈಗ ಕೊರೋನಾ ಮುಕ್ತವಾಗಿದ್ದು, ಸೋಂಕಿತರೆಲ್ಲರೂ ಗುಣಮುಖರಾಗಿದ್ದಾರೆ. ಹೀಗಾಗಿ ಹಸಿರುವಲಯಕ್ಕೆ ಸೇರ್ಪಡೆಯಾಗುವ ಸಿದ್ಧತೆಯಲ್ಲಿದೆ.
ಇದಕ್ಕೆಲ್ಲಾ ಇಲ್ಲಿನ ಜಿಲ್ಲಾಧಿಕಾರಿ ಸಜಿತ್ ಬಾಬು ಕಾರ್ಯಕ್ಷಮತೆಯೇ ಕಾರಣ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದು ಇತರ ಸೋಂಕಿತ ಜಿಲ್ಲೆಗಳಿಗೂ ಮಾದರಿಯಾಗಲಿದೆ.