Publish Date: Mon, 11 May 2020 (22:54 IST)
Updated Date: Mon, 11 May 2020 (22:55 IST)
ಕೊರೊನಾ ಟೈಮಿನಲ್ಲಿ ಲಾಕ್ ಡೌನ್ ವಿಧಿಸಲಾಗಿದ್ದರೂ ಇಲ್ಲೊಬ್ಬಳು ಒಂದು ರೂಪಾಯಿಗೆ ಒಂದು ಇಡ್ಲಿ ಮಾರಾಟ ಮಾಡುತ್ತಿದ್ದಾಳೆ.
ಇಡ್ಲಿ ಅಮ್ಮ ಎಂದು ಹೆಸರುವಾಸಿಯಾಗಿರುವ ವೃದ್ಧೆಯೊಬ್ಬಳು, ಕೂಲಿ ಕಾರ್ಮಿಕರು ಹಾಗೂ ವಲಸಿಗರಿಗೆ ಒಂದು ರೂಪಾಯಿಗೆ ಒಂದು ಇಡ್ಲಿ ಕೊಡುತ್ತಾ ಮಾದರಿಯಾಗಿದ್ದಾರೆ.
ತಮಿಳುನಾಡಿನಲ್ಲಿ ಕೆ. ಕಮಲಥಾಲ ಎನ್ನುವ 85 ವರ್ಷದ ವೃದ್ಧೆ ಅತೀ ಕಡಿಮೆ ಬೆಲೆಗೆ ಇಡ್ಲಿ ಮಾರಾಟ ಮಾಡುತ್ತಿದ್ದಾರೆ.
ವೃದ್ಧೆಯ ಕಾರ್ಯವನ್ನು ಮೆಚ್ಚಿ ಹಲವರು ಇಡ್ಲಿ ಮಾಡೋದಕ್ಕೆ ಬೇಕಾದ ವಸ್ತುಗಳನ್ನು ಕೊಡುತ್ತಾ ಆಕೆಯ ಸಮಾಜ ಸೇವೆ ಕಾರ್ಯಕ್ಕೆ ಕೈಜೋಡಿಸಿದ್ದಾರೆ.