Select Your Language

Notifications

webdunia
webdunia
webdunia
webdunia

ಝೀ ಸಿನಿ ಅವಾರ್ಡ್ಸ್ 2019: ಯಾರು ಯಾರಿಗೆ ಯಾವ ಪ್ರಶಸ್ತಿ!?

ಝೀ ಸಿನಿ ಅವಾರ್ಡ್ಸ್ 2019: ಯಾರು ಯಾರಿಗೆ ಯಾವ ಪ್ರಶಸ್ತಿ!?
ಬೆಂಗಳೂರು , ಸೋಮವಾರ, 25 ಮಾರ್ಚ್ 2019 (14:33 IST)
ನಿನ್ನೆ ಮುಂಬೈಯಲ್ಲಿ ಝೀ ಸಿನಿ ಅವಾರ್ಡ್ಸ್ 2019 ಸಮಾರಂಭ ನಡೆದಿದ್ದು ಹೆಚ್ಚಿನ ಬಾಲಿವುಡ್ ನಾಯಕ ನಾಯಕಿಯರು ಅಲ್ಲಿ ಹಾಜರಿದ್ದರು. 2018 ರ ಅತ್ಯುತ್ತಮ ಸಿನಿಮಾಗಳನ್ನು ಗುರುತಿಸುವುದರೊಂದಿಗೆ ಇದು ನಗು ಮತ್ತು ಪ್ರೀತಿಯ ರಾತ್ರಿಯಾಗಿತ್ತು. ರಣಬೀರ್ ಕಪೂರ್, ದೀಪಿಕಾ ಪಡುಕೋಣೆ ಮತ್ತು ಸಂಜಯ್ ಲೀಲಾ ಬನ್ಸಾಲಿ ಪ್ರಮುಖ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಸಂಜಯ್ ಲೀಲಾ ಬನ್ಸಾಲಿ ಪದ್ಮಾವತ್ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಸಂಜು ಚಿತ್ರಕ್ಕಾಗಿ ರಣಬೀರ್ ಕಪೂರ್ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಮತ್ತು ಪದ್ಮಾವತ್ ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ ಅತ್ಯುತ್ತಮ ನಾಯಕ ನಟಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಜಾಹ್ನವಿ ಕಪೂರ್ ತಮ್ಮ ಚೊಚ್ಚಲ ಚಿತ್ರ ಧಡಕ್‌ಗಾಗಿ ಮತ್ತು ಇಶಾನ್ ಕಟ್ಟರ್ ತಮ್ಮ ಬಿಯಾಂಡ್ ದಿ ಕ್ಲೌಡ್ಸ್/ಧಡಕ್ ಚಿತ್ರಕ್ಕಾಗಿ ಅತ್ಯುತ್ತಮ ಡೆಬ್ಯುಟೆಂಟ್ ಪ್ರಶಸ್ತಿಯನ್ನು ಪಡೆದರು.
 
ಪ್ರಶಸ್ತಿಯನ್ನು ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ:
 
ಅತ್ಯುತ್ತಮ ನಿರ್ದೇಶಕ
ಪದ್ಮಾವತ್ ಚಿತ್ರಕ್ಕಾಗಿ ಸಂಜಯ್ ಲೀಲಾ ಬನ್ಸಾಲಿ
 
ಅತ್ಯುತ್ತಮ ನಟ
ಸಂಜು ಚಿತ್ರಕ್ಕಾಗಿ ರಣಬೀರ್ ಕಪೂರ್
 
ಅತ್ಯುತ್ತಮ ನಟಿ
ಪದ್ಮಾವತ್ ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ
 
ಅತ್ಯುತ್ತಮ ನಟ ವೀಕ್ಷಕರ ಆಯ್ಕೆ
ಪದ್ಮಾವತ್ ಚಿತ್ರಕ್ಕಾಗಿ ರಣವೀರ್ ಸಿಂಗ್
 
ಅತ್ಯುತ್ತಮ ಪೋಷಕ ನಟ
ಸಂಜು ಚಿತ್ರಕ್ಕಾಗಿ ವಿಕ್ಕಿ ಕೌಶಲ್
 
ಅತ್ಯುತ್ತಮ ಪೋಷಕ ನಟಿ
ಝೀರೋ ಚಿತ್ರಕ್ಕಾಗಿ ಕತ್ರಿನಾ ಕೈಫ್
 
ವರ್ಷದ ಅಸಾಧಾರಣ ಸಾಧಕ
ಆಯುಷ್ಮಾನ್ ಖುರಾನಾ
 
ಅತ್ಯುತ್ತಮ ಡೆಬ್ಯುಟ್ (ಪುರುಷ)
ಬಿಯಾಂಡ್ ದಿ ಕ್ಲೌಡ್ಸ್/ಧಡಕ್ ಚಿತ್ರಕ್ಕಾಗಿ ಇಶಾನ್ ಕಟ್ಟರ್
 
ಅತ್ಯುತ್ತಮ ಡೆಬ್ಯುಟ್ (ಸ್ತ್ರೀ)
ದಢಕ್ ಚಿತ್ರಕ್ಕಾಗಿ ಜಾಹ್ನವಿ ಕಪೂರ್
 
ಅತ್ಯುತ್ತಮ ಖಳನಾಯಕ ನಟ
ಅಂಧಾಧುನ್ ಚಿತ್ರಕ್ಕಾಗಿ ಟಬು
 
ಅತ್ಯುತ್ತಮ ಹಾಸ್ಯ ನಟ
ಸೋನು ಕೆ ಟೀಟು ಕಿ ಸ್ವೀಟಿ ಚಿತ್ರಕ್ಕಾಗಿ ಕಾರ್ತಿಕ್ ಆರ್ಯನ್
 
ಭಾರತೀಯ ಸಿನಿಮಾಗೆ ಅಸಾಧಾರಣ ಕೊಡುಗೆ
ಹೇಮಾ ಮಾಲಿನಿ
 
ಸಾಮಾಜಿಕ ಬದಲಾವಣೆಗಾಗಿ ಅಸಾಧಾರಣ ಐಕಾನ್
ಸೋನಮ್ ಕಪೂರ್ ಅಹುಜಾ
 
ಅತ್ಯುತ್ತಮ ಹಿನ್ನೆಲೆ ಗಾಯಕ
ನೈನೋ ನೆ ಬಾಂಧಿ (ಗೋಲ್ಡ್) ಯಾಸಿರ್ ದೇಸಾಯಿ
 
ಅತ್ಯುತ್ತಮ ಹಿನ್ನೆಲೆ ಗಾಯಕಿ
ದಿಲ್ಬಾರೋ (ರಾಝಿ) ಗಾಗಿ ವಿಭಾ ಸರಫ್ ಮತ್ತು ಹರ್ಷದೀಪ್ ಕೌರ್
 
ಅತ್ಯುತ್ತಮ ಡೆಬ್ಯುಟ್ ನಿರ್ದೇಶಕ
ಸ್ತ್ರೀ ಚಿತ್ರಕ್ಕಾಗಿ ಅಮರ್ ಕೌಶಿಕ್
 
ಅತ್ಯುತ್ತಮ ನೃತ್ಯ ಸಂಯೋಜನೆ
ಘೂಮರ್ (ಪದ್ಮಾವತ್)
 
ಅತ್ಯುತ್ತಮ ಸಂಭಾಷಣೆ
ಸ್ತ್ರೀಗಾಗಿ ಪಂಕಜ್ ತ್ರಿಪಾಠಿ
 
ಅತ್ಯುತ್ತಮ ವಿಎಫ್‌ಎಕ್ಸ್
ಝೀರೋ

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ವರ್ಷಗಳ ಬಳಿಕ ‘ರಾಜಕುಮಾರ’ನ ನೆನೆಸಿಕೊಂಡ ಪವರ್ ಸ್ಟಾರ್ ಪುನೀತ್