ಈಚೆಗೆ ನಟ ಸಲ್ಮಾನ್ ಖಾನ್ ಮನೆಗೆ ನುಗ್ಗಿ ನಟನನ್ನು ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ ಆರೋಪಿಯ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ವಡೋದರಾ ಜಿಲ್ಲೆಯ ವಘೋಡಿಯಾ ಪ್ರದೇಶದ ಹಳ್ಳಿಯೊಂದರ 26 ವರ್ಷದ ಶಂಕಿತ ಆರೋಪಿ ಸಲ್ಮಾನ್ ಖಾನ್ ಅವರ ಮುಂಬೈ ಮನೆಗೆ ನುಗ್ಗಿ ಅವರ ಕಾರಿನಲ್ಲಿ ಬಾಂಬ್ ಇಡುವುದಾಗಿ ಬೆದರಿಕೆ ಸಂದೇಶವನ್ನು ಕಳುಹಿಸಿದ್ದಾರೆ.
2-3 ದಿನಗಳಲ್ಲಿ ತಮ್ಮ ಮುಂದೆ ಹಾಜರಾಗುವಂತೆ ಆ ವ್ಯಕ್ತಿಗೆ ನೋಟಿಸ್ ಜಾರಿ ಮಾಡಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 351 ರ ಅಡಿಯಲ್ಲಿ ಗುಜರಾತ್ ನಿವಾಸಿ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಬಾಂದ್ರಾ ಪ್ರದೇಶದಲ್ಲಿ ಖಾನ್ ಅವರ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಏಪ್ರಿಲ್ 13 ರ ಭಾನುವಾರದಂದು ಮುಂಬೈ ಟ್ರಾಫಿಕ್ ಪೋಲೀಸರ WhatsApp ಸಹಾಯವಾಣಿಯಲ್ಲಿ ಬೆದರಿಕೆ ಸಂದೇಶವನ್ನು ಸ್ವೀಕರಿಸಲಾಗಿದೆ. ಅದರಲ್ಲಿ ನಟ ಮನೆಗೆ ನುಗ್ಗಿ ಇಲ್ಲದಿದ್ದರೆ ಕಾರನ್ನು ಸ್ಫೋಟಿಸಿ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ.
ಎಚ್ಚರಿಕೆಯ ನಂತರ, ಮುಂಬೈ ಪೊಲೀಸರು ಗುಜರಾತ್‌ನಲ್ಲಿರುವಶಂಕಿತನ ನಿವಾಸಕ್ಕೆ ಭೇಟಿ ನೀಡಿದರು. ತನಿಖೆಯ ನಂತರ, ವ್ಯಕ್ತಿಯು ಮಾನಸಿಕವಾಗಿ ಅಸ್ಥಿರನಾಗಿದ್ದಾನೆ ಎಂದು ತಿಳಿದುಬಂದಿದೆ ಮತ್ತು ಅವನ ಕುಟುಂಬವು ಪ್ರಸ್ತುತ ಚಿಕಿತ್ಸೆಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.