ಬೆಂಗಳೂರು: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಆಗಾಗ ಜೀವಬೆದರಿಕೆಗಳು ಬರುತ್ತಾನೆ ಇದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಹೆಸರಿನಿಂದ ಸಾಕಷ್ಟು ಜೀವಬೆದರಿಕೆಗಳು ಬರುತ್ತಿದೆ. ನಟನ ಮನೆ ಮೇಲೆ ನಡೆದ ದಾಳಿ ಬಳಿಕ ಬುಲೆಟ್ ಫ್ರೂಪ್ ಗಾಜನ್ನು ಅಳವಡಿಸಲಾಗಿತ್ತು.
ಬರ್ತಡೇ ದಿನ ತಮ್ಮ ಮನೆಯ ಗಾಜಿನಿಂದ ಅಭಿಮಾನಿಗಳಿಗೆ ದರ್ಶನ ನೀಡಿದ ಬೆನ್ನಲ್ಲೇ ಇದೀಗ ಸಲ್ಮಾನ್ ಖಾನ್‌ಗೆ ಹೊಸ ಟೆನ್ಷನ್ ಶುರುವಾಗಿದೆ. ಈಚೆಗೆ ಬಂದ ಜೀವಬೆದರಿಕೆಯಲ್ಲಿ ನಟನ ಮನೆಗೆ ನುಗ್ಗಿ ಕೊಲ್ಲುವುದಾಗಿ ಸಂದೇಶ ಬಂದಿದೆ.
ಮುಂಬೈನ ವರ್ಲಿಯಲ್ಲಿರುವ ಸಾರಿಗೆ ಇಲಾಖೆಯ ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಈ ಬೆದರಿಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆದರಿಕೆ ಸಂದೇಶದಲ್ಲಿ ನಟನ ಮನೆಗೆ ನುಗ್ಗಿ ಕೊಲ್ಲುವುದಾಗಿ ಎಚ್ಚರಿಕೆ ನೀಡಲಾಯಿತು ಮತ್ತು ಅವರ ಕಾರನ್ನು ಬಾಂಬ್‌ನಿಂದ ಸ್ಫೋಟಿಸುವ ಬೆದರಿಕೆಯೂ ಇದೆ.
ಈ ಘಟನೆಯ ನಂತರ ವರ್ಲಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ. ಅಧಿಕಾರಿಗಳು ಪ್ರಸ್ತುತ ಬೆದರಿಕೆಯ ಮೂಲ ಮತ್ತು ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ, ಲಾರೆನ್ಸ್ ಬಿಷ್ಣೋಯ್ ಅವರಿಂದ ಈ ಬೆದರಿಕೆ ಬಂದಿದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.
ಸಲ್ಮಾನ್ ಮೇಲೆ ಲಾರೆನ್ಸ್ ಬಿಷ್ಣೋಯ್ ಸಿಟ್ಟು ಯಾಕೆ?
'ಹಮ್ ಸಾಥ್ ಸಾಥ್ ಹೈ' ಚಿತ್ರದ ಚಿತ್ರೀಕರಣದ ವೇಳೆ ನಟ ಕೃಷ್ಣಮೃಗವನ್ನು ಕೊಂದಿದ್ದಕ್ಕಾಗಿ ಸಲ್ಮಾನ್‌ನಿಂದ ಸೇಡು ತೀರಿಸಿಕೊಳ್ಳಲು ಬಿಷ್ಣೋಯ್ ಬಯಸಿದ್ದರು. ಕೃಷ್ಣಮೃಗವನ್ನು ಗೌರವಿಸುವ ಬಿಷ್ಣೋಯ್ ಸಮುದಾಯವು ಈ ಘಟನೆಯಿಂದ ತೀವ್ರವಾಗಿ ಮನನೊಂದಿದೆ. 2018 ರಲ್ಲಿ, ಜೋಧ್‌ಪುರದಲ್ಲಿ ನ್ಯಾಯಾಲಯಕ್ಕೆ ಹಾಜರಾದಾಗ, ಬಿಷ್ಣೋಯ್, "ನಾವು ಸಲ್ಮಾನ್ ಖಾನ್ ಅವರನ್ನು ಕೊಲ್ಲುತ್ತೇವೆ. ನಾವು ಕ್ರಮ ಕೈಗೊಂಡ ನಂತರ ಎಲ್ಲರಿಗೂ ತಿಳಿಯುತ್ತದೆ. ನಾನು ಸದ್ಯಕ್ಕೆ ಏನನ್ನೂ ಮಾಡಿಲ್ಲ, ಅವರು ಯಾವುದೇ ಕಾರಣವಿಲ್ಲದೆ ನನ್ನ ಮೇಲೆ ಅಪರಾಧ ಆರೋಪ ಮಾಡುತ್ತಿದ್ದಾರೆ" ಎಂದು ಹೇಳಿದರು.