Webdunia - Bharat's app for daily news and videos

Install App

ನಿರ್ದೇಶಕ ಕರಣ್ ಜೋಹರ್ ಒಬ್ಬ ಸ್ವಜನಪಕ್ಷಪಾತಿ ಎಂದು ಟ್ರೋಲಿಗರು ಹೇಳಿದ್ಯಾಕೆ?

Webdunia
ಭಾನುವಾರ, 19 ಆಗಸ್ಟ್ 2018 (11:49 IST)
ಮುಂಬೈ : ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಇನ್ ಸ್ಟಾಗ್ರಾಮ್ ನಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಮಗಳು ಶ್ವೇತಾ ಬಚ್ಚನ್ ಮತ್ತು ಅವರ ಪುತ್ರಿ ನವ್ಯಾ ನಂದಾ ಅವರ ಮಾಡೆಲಿಂಗ್ ಫೋಟೋವೊಂದನ್ನು ಶೇರ್ ಮಾಡಿ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ಮೊನಿಷಾ ಜೈಸಿಂಗ್‌ ಅವರೊಂದಿಗೆ ಶ್ವೇತಾ ನಂದಾ ನೂತನ ವಸ್ತ್ರವಿನ್ಯಾಸದ ಬ್ರ್ಯಾಂಡ್ ಆರಂಭಿಸಿದ್ದಾರೆ. ಹೊಸ ವಿನ್ಯಾಸಗಳಿಗಾಗಿ ಪುತ್ರಿ ನವ್ಯಾ ನವೇಲಿ ಜೊತೆ ಶ್ವೇತಾ ಮಾಡೆಲ್ ಆಗಿದ್ದು, ಅವರ ಈ ಮಾಡೆಲಿಂಗ್ ಫೋಟೋವನ್ನು ಬಾಲಿವುಡ್‌ ನಿರ್ದೇಶಕ ಕರಣ್ ಜೋಹರ್‌ ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಶೇರ್ ಮಾಡಿ, 'ಯಶಸ್ವಿ ವಿನ್ಯಾಸಗಾರ್ತಿ ಮತ್ತು ಫ್ಯಾಷನಬಲ್‌ ಚತುರೆ ಇಬ್ಬರೂ ಸೇರಿ ರೂಪಿಸಿರುವ ವಿನ್ಯಾಸಗಳು ಎಲ್ಲರನ್ನೂ ಮೆಚ್ಚಿಸಲಿವೆ. ಟೀನೇಜ್ ಮಾಡೆಲ್‌ ನವ್ಯಾ ನಂದಾ ಪ್ರಮುಖ ಆಕರ್ಷಣೆ,' ಎಂದು ಬರೆದಿದ್ದರು.


ಇದರಿಂದ ಕೋಪಗೊಂಡ ಕೆಲವು ನೆಟ್ಟಿಗರು ನೀವೋಬ್ಬ ಸ್ವಜನಪಕ್ಷಪಾತಿ, ನೀವು ನವ್ಯಾರನ್ನು ಸಿನಿಮಾಗೆ ಪರಿಚಯಿಸಲಿದ್ದೀರಿ. ನೀವೊಬ್ಬ ಪಕ್ಷಪಾತಿ, ಹೀಗಾಗಿ ನಿಮಗೆ ನಿಮ್ಮ ಸುತ್ತ ಇರುವ ಪ್ರತಿಭಾವಂತ ನಟ ನಟಿಯರು ಕಾಣುವುದಿಲ್ಲ ಎಂದಿದ್ದಾರೆ. ದೊಡ್ಡವರ ಫೋಟೋಗಳನ್ನೇ ಹಾಕುವ ಬದಲು ಪ್ರತಿಭಾವಂತರ ಫೋಟೋಗಳನ್ನೂ ಪೋಸ್ಟ್‌ ಮಾಡಿ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.


ಅಷ್ಟೇ ಅಲ್ಲದೇ ಅನುಭವಿ ವಿನ್ಯಾಸಕಾರರೊಬ್ಬರು 'ನಾನು ಹನ್ನೆರೆಡು ವರ್ಷಗಳಿಂದ ಫ್ಯಾಷನ್ ಉದ್ಯಮದಲ್ಲಿದ್ದೇನೆ. ದೊಡ್ಡ ಬ್ರ್ಯಾಂಡ್‌ ಗಳಿಗೆ ಕೆಲಸ ಮಾಡಿದ್ದೇನೆ. ಹೀಗಿದ್ದರೂ ಕಳೆದ ಎಂಟು ತಿಂಗಳಿನಿಂದ ಕೆಲಸವಿಲ್ಲದೆ ಕುಳಿತುಕೊಳ್ಳುವಂತಾಗಿದೆ. ನನ್ನ ಹೆಸರಿನ ಹಿಂದೆ ದೊಡ್ಡವರ ಸರ್‌ನೇಮ್ ಇದ್ದಿದ್ದರೆ ನನಗೆ ಇತಂಹ ಕೆಟ್ಟ ಪರಿಸ್ಥಿತಿ ಬರುತ್ತಿರಲಿಲ್ಲ,' ಎಂದು ಕಮೆಂಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸು ಫ್ರಮ್ ಸೋ ಶೋ ಕಡಿಮೆಯಾಯ್ತು ಎಂದ ಪ್ರೇಕ್ಷಕರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು

ಸ್ಟಾರ್ ಗಳಿಲ್ಲದಿದ್ದರೂ ಮೊದಲ ದಿನವೇ ಸು ಫ್ರಮ್ ಸೋ ಸಿನಿಮಾ ಭರ್ಜರಿ ಕಲೆಕ್ಷನ್

ಥೈಲ್ಯಾಂಡ್ ನಿಂದ ವಾಪಸ್ ಆದ ದರ್ಶನ್ ಗೆ ವಿವಿಐಪಿ ಭದ್ರತೆ: video

ಆ ಕ್ಷಣ ಶಾಶ್ವತವಾಗಿ ಅಚ್ಚೊತ್ತಿದೆ: ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ತಂದೆ ಬಗ್ಗೆ ಶ್ರುತಿ ಹಾಸನ್ ಹೆಮ್ಮೆ

ಪೂಜಾ, ಕಿಶನ್ ಮದುವೆ ಬೆನ್ನಲ್ಲೇ ಆದಿ, ಭಾಗ್ಯಗೇ ಮದುವೆ ಮಾಡುವಂತೆ ಡೈರೆಕ್ಟರ್‌ಗೆ ಫ್ಯಾನ್ಸ್ ಬೇಡಿಕೆ

ಮುಂದಿನ ಸುದ್ದಿ
Show comments