Publish Date: Wed, 14 Feb 2018 (07:21 IST)
Updated Date: Wed, 14 Feb 2018 (07:24 IST)
ಮುಂಬೈ : ಇತ್ತೀಚೆಗೆ ಇಲಿಯಾನ ಟ್ವಿಟ್ಟರ್‌ನಲ್ಲಿ ತನ್ನ ಬಾಯ್‌ಫ್ರೆಂಡ್ ಆ್ಯಂಡ್ರೂ ಜೊತೆಗಿನ ಫೋಟೋ ಹಾಕಿ ಸುದ್ದಿಯಾಗಿದ್ದ ನಟಿ ಇಲಿಯಾನ ಅವರು ನಟ ಅಜಯ್ ದೇವಗನ್ ಅವರು ಕೇಳಿರುವ ಪ್ರಶ್ನೆಗೆ ಒಂದು ಕ್ಷಣ ಕಸಿವಿಸಿಗೊಂಡಿದ್ದಾರೆ.
ಅದೇನೆಂದರೆ ಇಲಿಯಾನ ಡಿಕ್ರೂಜ್ ಮತ್ತು ಅಜಯ್ ದೇವಗನ್ ಅವರು ಜೊತೆಯಾಗಿ ಚಿತ್ರವೊಂದರ ಆಡಿಯೋ ಲಾಂಚ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ಅಜಯ್ ದೇವಗನ್ ಅವರು ಇಲಿಯಾನ ಅವರಿಗೆ ‘ನೀನು ಮದುವೆಯಾಗಿದ್ದೀಯಾ?’ ಎಂಬ ಪ್ರಶ್ನೆಯನ್ನು ಕೇಳಿದಾಗ ಅವರು ಒಂದು ಕ್ಷಣ ತಬ್ಬಿಬ್ಬಾದರು. ನಂತರ ಆಕೆ ‘ನನಗೆ ನನ್ನ ವೈಯಕ್ತಿಕ ವಿಚಾರಗಳನ್ನು ಸಿನಿಮಾ ವೇದಿಕೆಯಲ್ಲಿ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಸಿನಿಮಾವನ್ನು ಸಿನಿಮಾವಾಗಿ, ವೈಯಕ್ತಿಕ ಜೀವನನ್ನು ವೈಯಕ್ತಿಕವಾಗಿಯೇ ನೋಡುತ್ತೇನೆ. ಎರಡರ ನಡುವೆ ಒಂದು ದೊಡ್ಡ ಗೆರೆ ಹಾಕಿಕೊಳ್ಳಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ