Select Your Language

Notifications

webdunia
webdunia
webdunia
webdunia

ರಜನೀಕಾಂತ್ ನಟಿಸೋದನ್ನು ನಿಲ್ಲಿಸಲಿ ಎಂದಿದ್ದು ಯಾರು ಗೊತ್ತಾ?

ರಜನೀಕಾಂತ್ ನಟಿಸೋದನ್ನು ನಿಲ್ಲಿಸಲಿ ಎಂದಿದ್ದು ಯಾರು ಗೊತ್ತಾ?
ಚೆನ್ನೈ , ಗುರುವಾರ, 14 ಜೂನ್ 2018 (06:35 IST)
ಚೆನ್ನೈ : ತಮಿಳು ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಸೂಪರ್ ಸ್ಟಾರ್ ಎನಿಸಿಕೊಂಡ ನಟ ರಜನೀಕಾಂತ್ ಅವರಿಗೆ ಸಿನಿಮಾದಲ್ಲಿ ನಟಿಸೋದನ್ನು ನಿಲ್ಲಿಸಲಿ ಎಂದು ಅವರ ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರಂತೆ.


ಸೂಪರ್ ಸ್ಟಾರ್ ರಜನೀಕಾಂತ್ ಅವರು ಚಿತ್ರರಂಗದಲ್ಲೇ ಅತ್ಯುತ್ತಮ ನಟ ಎಂದೆನಿಸಿಕೊಂಡವರು. ಎಂತಹ ಪಾತ್ರ ನೀಡಿದ್ದರೂ ಅದಕ್ಕೆ ಜೀವ ತುಂಬುವ ತಾಕತ್ತು ಅವರಿಗಿದೆ. ಅವರ ನಟಿಸಿದ ಸಿನಿಮಾವನ್ನು ನೋಡಲು ಕೋಟ್ಯಾಂತರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ.


ಇಂತಹ ಕಲಾವಿದ ನಟಿಸೋದನ್ನು ನಿಲ್ಲಿಸಲಿ ಎಂದು ಅವರ ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರಂತೆ. ಅವರು ಬೇರೆ ಯಾರು ಅಲ್ಲ. ಅವರ ಸ್ವಂತ ಮಗಳು ಐಶ್ವರ್ಯ. ಹಾಗಂತ ಅವರೇನು ತಮ್ಮ ತಂದೆ ಸಂಪೂರ್ಣವಾಗಿ ಚಿತ್ರರಂಗ ತೊರೆಯಲಿ ಎಂದು ಹೇಳಿಲ್ಲ. ಬದಲಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿ ಎಂದಿದ್ದಾರೆ. ಇದುವರೆಗೂ ನಮ್ಮ ತಂದೆ ಚಿತ್ರಗಳಿಗಾಗಿಯೇ ಹೆಚ್ಚು ಸಮಯ ಕಳೆದಿದ್ದಾರೆ. ಇನ್ನಾದರೂ ತಮ್ಮ ಕುಟುಂಬದ ಜತೆ ಹೆಚ್ಚಿನ  ಸಮಯ ಕಳೆಯಲಿ ಎಂಬುದು ಅವರ ಆಶಯವಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಸಿನಿಮಾ ಹೆಸರುಗಳಲ್ಲಿ ಮಾಡಿದ ಮದುವೆ ಆಮಂತ್ರಣ ಪತ್ರಿಕೆ ಹೇಗಿದೆ ಗೊತ್ತಾ ?