ಮುಂಬೈ : ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಅನಂದ್ ಅಹುಜಾ  ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟದ್ದು, ಮದುವೆಯಾದ ಬಳಿಕ ಪತಿ ಅನಂದ್ ಅಹುಜಾ ತನ್ನ ಹೆಸರಿನ ನಡುವೆ ಒಂದು ಎಸ್ ಸೇರಿಸಿಕೊಂಡು ಆನಂದ್ ಎಸ್ ಅಹುಜಾ ಎಂದು, ಹೆಸರನ್ನು ಬದಲಾಯಿಸಿಕೊಂಡು  ಸುದ್ದಿಯಾಗಿದ್ದರು. ಈ ಬಗ್ಗೆ ಇದೀಗ ಪತ್ನಿ ಸೋನಂ ಕಪೂರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
									
			
			 
 			
 
 			
					
			        							
								
																	
ಕ್ಯಾನೆ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಸೋನಂ ಕಪೂರ್ ಅವರಿಗೆ , ಮಾಧ್ಯಮಗಳು ಆನಂದ್ ಅಹುಜಾ ತನ್ನ ಹೆಸರು ಬದಲಾವಣೆ ಮಾಡಿದ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ಇದಕ್ಕೆ ಉತ್ತರಿಸಿದ ಸೋನಂ ಕಪೂರ್ ಅವರು,’ ನಿಜವಾಗಿಯೂ ಅನಂದ್ ಹೆಸರು ಬದಲಿಸಿದ ಬಗ್ಗೆ ನನಗೆ ನನ್ನ ಮ್ಯಾನೆಜರ್ ಹೇಳಿ ಗೊತ್ತು. ನಾನು ನಿಂತರೂ ಸುದ್ದಿಯಾಗುತ್ತೇನೆ. ಕೂತರೂ ಸುದ್ದಿಯಾಗುತ್ತೇನೆ. ನನ್ನ ಬಗ್ಗೆ ಜನ ಇಷ್ಟೊಂದು ಕುತೂಹಲಭರಿತರಾಗಿದ್ದಾರೆ ಎಂದರೆ ನಿಜಕ್ಕೂ ಸಂತೋಷವಾಗುತ್ತಿದೆ. ನಾನು ಮಾಡುವ ಪ್ರತಿಯೊಂದು ವಿಚಾರವೂ ಸುದ್ದಿಗೆ ಗ್ರಾಸವಾಗುತ್ತದೆ ಎಂದರೆ ಅದು ನನಗೆ ಖುಷಿಕೊಡುವ ವಿಚಾರ’ ಎಂದಿದ್ದಾರೆ.
									
										
								
																	
‘ಆದರೆ ನನ್ನ ಪಾಪದ ಗಂಡನ ಬಗ್ಗೆ ದಯವಿಟ್ಟು ಸುದ್ದಿ ಮಾಡಬೇಡಿ. ನನ್ನ ಪತಿ ಹೆಸರು ಬದಲಿಸಿರುವ ಬಗ್ಗೆ ನನಗೆ ಗೊತ್ತಿಲ್ಲ.ಅನಂದ್ ಅಹುಜಾ ನಿಜಕ್ಕೂ ವಿಶೇಷ ವ್ಯಕ್ತಿ. ಅದೇ ಕಾರಣಕ್ಕೆ ನಾನು ಅವರನ್ನು ಮದುವೆಯಾಗಿದ್ದೇನೆ. ಆತನನ್ನು ಪತಿಯಾಗಿ ಪಡೆಯಲು ನಾನು ನಿಜಕ್ಕೂ ಪುಣ್ಯ ಮಾಡಿದ್ದೇನೆ .ಇದೊಂದು ಬದಲಾವಣೆಯ ಸೂಚನೆ. ಅವರ ಇಷ್ಟದಂತೆ ಅವರು ಮಾಡಿದ್ದಾರೆ. ಈ ಬಗ್ಗೆ ಬಹಿರಂಗವಾಗಿ ಚರ್ಚಿಸಲು ನನಗೆ ಇಷ್ಟವಿಲ್ಲ’ ಎಂದು ಅವರು ಹೇಳಿದ್ದಾರೆ.
									
											
							                     
							
							
			        							
								
																	
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ