Select Your Language

Notifications

webdunia
webdunia
webdunia
webdunia

ಬ್ಯಾಂಕಾಕ್‌ ನಲ್ಲಿ 'ಗೋಲ್ಡನ್‌ ಲೀಫ್‌ ಐಸ್‌ಕ್ರೀಂ' ತಿಂದ ಶಿಲ್ಪಾ ಶೆಟ್ಟಿ ಹೇಳಿದ್ದೇನು?

ಬ್ಯಾಂಕಾಕ್‌ ನಲ್ಲಿ 'ಗೋಲ್ಡನ್‌ ಲೀಫ್‌ ಐಸ್‌ಕ್ರೀಂ' ತಿಂದ ಶಿಲ್ಪಾ ಶೆಟ್ಟಿ ಹೇಳಿದ್ದೇನು?
ಮುಂಬೈ , ಶನಿವಾರ, 17 ನವೆಂಬರ್ 2018 (07:14 IST)
ಮುಂಬೈ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ 'ಗೋಲ್ಡನ್‌ ಲೀಫ್‌ ಐಸ್‌ಕ್ರೀಂ' ತಿನ್ನುವುದರ ಮೂಲಕ ಇದೀಗ ಸುದ್ದಿಯಲ್ಲಿದ್ದಾರೆ.

ಇತ್ತೀಚೆಗಷ್ಟೇ ಶಿಲ್ಪಾ ಶೆಟ್ಟಿ ಬ್ಯಾಂಕಾಕ್‌ಗೆ ಭೇಟಿ ನೀಡಿದ್ದರು. ಅಲ್ಲಿ ಈ ವಿಶೇಷ 'ಗೋಲ್ಡನ್‌ ಲೀಫ್‌ ಐಸ್‌ಕ್ರೀಂ' ನ ಬಗ್ಗೆ ಮಾಹಿತಿ ಪಡೆದು ರೆಸ್ಟೊರೆಂಟ್‌ಗೆ ಭೇಟಿ ನೀಡಿ, ಅದರ ರುಚಿ ಸವಿದಿದ್ದಾರೆ. ಅದಕ್ಕೆ ಸಂಬಂದಪಟ್ಟ  ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

 

ಜೊತೆಗೆ ಈ ವಿಡಿಯೋದಲ್ಲಿ 'ಐಸ್‌ಕ್ರೀಂ ತುಂಬಾ ರುಚಿಯಾಗಿದೆ. ನಾನು ತಿನ್ನುತ್ತಿರುವುದು ವೆನಿಲಾ ಸ್ವಾದದ ಐಸ್‌ಕ್ರೀಂ. ನೀರು ಬೆರೆಸದ ಹಾಲಿನಿಂದ ತಯಾರಿಸುವ ಈ ಐಸ್‌ಕ್ರಿಂಗೆ 24 ಕ್ಯಾರೆಟ್ ಗುಣಮಟ್ಟದ ಚಿನ್ನದ ಲೇಪನ ಮಾಡುತ್ತಾರೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಸ್ವಾದಗಳಲ್ಲಿ ಇದನ್ನು ತಯಾರಿಸಿಕೊಡುತ್ತಾರೆ. ಇದರ ಬೆಲೆ ರೂ.937!  ಎಂದು ಹೇಳಿದ್ದಾರೆ. ಈವರೆಗೆ ಇದನ್ನು 7.5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್ 1 ಎನ್ 1 ಕಾಯಿಲೆಗೆ ಬಲಿಯಾದ ಸ್ಯಾಂಡಲ್ ವುಡ್ ನಿರ್ದೇಶಕ ಶಂಕರಲಿಂಗ ಸುಗ್ಗನಹಳ್ಳಿ