Publish Date: Wed, 14 Nov 2018 (13:03 IST)
Updated Date: Wed, 14 Nov 2018 (13:05 IST)
ಮುಂಬೈ : ನಟ-ನಿರ್ಮಾಪಕ ರಿತೇಶ್ ದೇಶ್‌ಮುಖ್ ಅವರು ತಮ್ಮ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ತಮ್ಮದೇ ಸ್ಟೈಲ್ ನಲ್ಲಿ ತಿರುಗೇಟು ನೀಡಿದ್ದಾರೆ.
ನಟ ರಿತೇಶ್ ದೇಶ್‌ಮುಖ್ ನಟಿಸಿರುವ ಮರಾಠಿ ಭಾಷೆಯ `ಮೌಳಿ' ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಈ ಟೀಸರ್ ಗೆ ಎಲ್ಲಾಕಡೆಯಿಂದ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಆದರೆ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ `ಇಂಥ ಅಭಿನಯವನ್ನು ಹಿಂದೆ ಚಿತ್ರಗಳಲ್ಲಿ ಯಾಕೆ ತೋರಿಸುವುದಿಲ್ಲ. ಮರಾಠಿ ಚಿತ್ರಗಳಿಗೆ ಮಾತ್ರ ಸೀಮಿತ ಮಾಡಿಕೊಂಡಿದ್ದೀರಾ..' ಎಂದು ವಿಭಿನ್ನವಾದ ಹೇಳಿಕೆ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನಟ ರಿತೇಶ್ ದೇಶ್‌ಮುಖ್ ,’ಆರ್‌ಜಿವಿ ಸರ್, ನಿಮ್ಮ ಅನನ್ಯವಾದ ಪದಪ್ರಯೋಗಕ್ಕೆ ಧನ್ಯವಾದಗಳು. ಇಂತಹ ಸ್ಕ್ರಿಪ್ಟ್ ಗಳು ನನಗೆ ಹಿಂದಿಯಲ್ಲಿ ಯಾಕೆ ಸಿಗುವುದಿಲ್ಲ?. ಇಂಥ ಪಾತ್ರವನ್ನು ಮರಾಠಿಯಲ್ಲಿ ಅಭಿನಯಿಸುವುದಕ್ಕೆ ತುಂಬಾ ಆನಂದವಾಗುತ್ತದೆ. ಮಾತೃ ಭಾಷೆ ತನ್ನದೇ ಆದ ಶಕ್ತಿಯನ್ನು ಹೊಂದಿದೆ..' ಎಂದು ಹೇಳುವುದರ ಮೂಲಕ ಟಾಂಗ್ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.