ಮುಂಬೈ : ಎರಡು ವರ್ಷದ ಬಾಲಕಿಯ ಮೇಲೆ 14 ಮತ್ತು 15 ವರ್ಷದ ಇಬ್ಬರು ಸಹೋದರರು ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಮುಂಬೈನ ಪಲ್ಘರ್ ಎಂಬಲ್ಲಿ ನಡೆದಿದೆ.
ಬಾಲಕಿಯ ತಂದೆ ತಾಯಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ಮನೆ ಹೊರಗಡೆ ಆಟವಾಡುತ್ತಿದ್ದ ಬಾಲಕಿಯನ್ನು ಅಪ್ರಾಪ್ರ ಸಹೋದರರಿಬ್ಬರು ಮನೆಯಿಂದ ಸ್ವಲ್ಪ ದೂರಲ್ಲಿದ್ದ ಕೊಠಡಿಗೆ ಬರುವಂತೆ ಮಾಡಿ ಬಾಗಿಲು ಹಾಕಿಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ.
ಇತ್ತ ಕೋಣೆಯೊಳಗೆ ಬಾಲಕಿ ಅಳುತ್ತಿರುವುದನ್ನು ಕೇಳಿಸಿಕೊಂಡ ನೆರೆಹೊರೆಯವರು ಆಕೆಯ ಪೋಷಕರಿಗೆ ಈ ಬಗ್ಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆದಾವಿಸಿದ ಪೋಷಕರು ಹಾಗೂ ಸ್ಥಳೀಯರು ಕೊಠಡಿಯ ಬಾಗಿಲು ತೆರೆದಾಗ ಬಾಲಕಿ ಅಳುತ್ತಿದ್ದಳು. ಕೂಡಲೇ ಬಾಲಕರಿಬ್ಬರನ್ನೂ ಹಿಡಿದುಕೊಂಡ ಸ್ಥಳೀಯರು ಅವರಿಗೆ ಚೆನ್ನಾಗಿ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ
ಈ ಘಟನೆಗೆ ಸಂಬಂಧಿಸಿದಂತೆ ಬಾಲಕರ ವಿರುದ್ಧ ಐಪಿಸಿ ಸೆಕ್ಷನ್ 376(2) ಗ್ಯಾಂಗ್ ರೇಪ್ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇತ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.