Select Your Language

Notifications

webdunia
webdunia
webdunia
webdunia

ಹಸ್ತಮೈಥುನ ದೃಶ್ಯದ ಬಗ್ಗೆ ಟ್ರೋಲ್ ಮಾಡಿದವರಿಗೆ ನಟಿ ಸ್ವರಾ ಭಾಸ್ಕರ್ ಹೇಳಿದ್ದೇನು?

ಹಸ್ತಮೈಥುನ ದೃಶ್ಯದ ಬಗ್ಗೆ ಟ್ರೋಲ್ ಮಾಡಿದವರಿಗೆ ನಟಿ ಸ್ವರಾ ಭಾಸ್ಕರ್ ಹೇಳಿದ್ದೇನು?
ಮುಂಬೈ , ಗುರುವಾರ, 7 ಜೂನ್ 2018 (14:39 IST)
ಮುಂಬೈ : ಬಾಲಿವುಡ್ ನ 'ವೀರೇ ದಿ ವೆಡ್ಡಿಂಗ್' ಚಿತ್ರದಲ್ಲಿ ನಟಿ ಸ್ವರಾ ಭಾಸ್ಕರ್ ಅವರ  ಹಸ್ತಮೈಥುನ ದೃಶ್ಯದ ಬಗ್ಗೆ ಟ್ರೋಲ್ ಮಾಡಿದವರಿಗೆ ಇದೀಗ ನಟಿ ಸ್ವರಾ ಭಾಸ್ಕರ್ ಅವರು ತಿರುಗೇಟು ನೀಡಿದ್ದಾರೆ.


ಬಾಲಿವುಡ್ ನ 'ವೀರೇ ದಿ ವೆಡ್ಡಿಂಗ್' ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ ನಲ್ಲಿಯೂ  ಸಕತ್ ಸೌಂಡ್ ಮಾಡುತ್ತಿದೆ. ಆದರೆ ಈ ನಡುವೆ ಚಿತ್ರದಲ್ಲಿ ಬರುವ  ನಟಿ ಸ್ವರಾ ಭಾಸ್ಕರ್ ಅವರ ಹಸ್ತಮೈಥುನ ದೃಶ್ಯವೊಂದು ಮುಜುಗರಕ್ಕೀಡು ಮಾಡುತ್ತಿದೆ ಎಂದು ಹಲವರು ಕಾಮೆಂಟ್ ಮಾಡಿದ್ದರು.


ಇದನ್ನು ಗಮನಿಸಿದ ನಟಿ ಸ್ವರಾ ಭಾಸ್ಕರ್ ಅವರು ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ಬದಲಾಗಿ ತಿರುಗೇಟು ನೀಡಿದ್ದಾರೆ. ‘ಟ್ರೋಲರ್ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಮೂರ್ಖರಿಗೆ ಉತ್ತರ ನೀಡಲು ನನಗೆ ಸಮಯವಿಲ್ಲ. 'ವೀರೇ ದಿ ವೆಡ್ಡಿಂಗ್' ಯಶಸ್ಸು ಸಹಿಸಲಾಗದ ಜನರು ಈ ರೀತಿ ಕಮೆಂಟ್ ಮಾಡುತ್ತಿದ್ದಾರೆ. ಹಣ ಪಡೆದು ಅನೇಕರು ಟ್ರೋಲ್ ಮಾಡಿದ್ದರು. ಇಂಥ ಟ್ರೋಲ್ ಗಳಿಗೆಲ್ಲ ನಾನು ಹೆದರುವುದಿಲ್ಲ’ವೆಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಶಿಲ್ಪಾ ಗೆ ಜನರು ಟ್ರೋಲ್ ಮಾಡಿದ್ಯಾಕೆ?