Select Your Language

Notifications

webdunia
webdunia
webdunia
webdunia

ಶಾರುಖ್ ಖಾನ್, ವಿರಾಟ್ ಕೊಹ್ಲಿ ಫ್ಯಾನ್ಸ್ ನಡುವೆ ವಾರ್

ಶಾರುಖ್ ಖಾನ್, ವಿರಾಟ್ ಕೊಹ್ಲಿ ಫ್ಯಾನ್ಸ್ ನಡುವೆ ವಾರ್
ಮುಂಬೈ , ಗುರುವಾರ, 30 ಮಾರ್ಚ್ 2023 (09:20 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಫ್ಯಾನ್ಸ್ ನಡುವೆ ಟ್ವಿಟರ್ ವಾರ್ ಶುರುವಾಗಿದೆ.

ಇದಕ್ಕೆಲ್ಲಾ ಕಾರಣವಾಗಿದ್ದು ಟ್ವಿಟರಿಗರೊಬ್ಬರು ಇಬ್ಬರ ನಡುವೆ ಯಾರು ಗ್ರೇಟ್ ಐಕಾನ್ ಎಂದು ಸಮೀಕ್ಷೆ ನಡೆಸಿದ್ದು. ಭಾರತದ ಗ್ರೇಟ್ ಐಕಾನ್ ಯಾರು ಎಂಬ ಪೋಲ್ ನಡೆಸಿದ ಟ್ವಿಟರಿಗ ಕೊಹ್ಲಿ ಮತ್ತು ಶಾರುಖ್ ಖಾನ್ ಹೆಸರನ್ನು ಆಯ್ಕೆಯಾಗಿ ನೀಡಿದ್ದರು. ಈ ಸಮೀಕ್ಷೆಯಲ್ಲಿ ಕೊಹ್ಲಿ ಹೆಸರು ಮುಂಚೂಣಿಯಲ್ಲಿತ್ತು.

ಹಾಗಿದ್ದರೂ ಇಬ್ಬರೂ ಸೆಲೆಬ್ರಿಟಿಗಳ ಫ್ಯಾನ್ಸ್ ನಡುವೆ ವಾರ್ ಶುರುವಾಗಿದೆ. ಕೊಹ್ಲಿ ಸಮರ್ಥಕರು ಕೊಹ್ಲಿಯನ್ನು ಹೊಗಳಿ ಶಾರುಖ್ ರನ್ನು ತೆಗಳಿದರೆ, ಶಾರುಖ್ ಸಮರ್ಥಕರು ಶಾರುಖ್ ರನ್ನು ಹೊಗಳಿ ಕೊಹ್ಲಿಯನ್ನು ತೆಗಳಿದ್ದಾರೆ. ಇಬ್ಬರೂ ಸ್ಟಾರ್ ಗಳ ನಡುವಿನ ಟ್ವಿಟರ್ ವಾರ್ ಜೋರಾಗಿ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾ ಬರ್ತ್ ಡೇಗೆ ಮೊದಲೇ ಅಭಿಮಾನಿಗಳಿಂದ ಸರ್ಪೈಸ್ ಉಡುಗೊರೆ