ವಿದ್ಯಾ ಬಾಲನ್ ಹೆಸರಿನಲ್ಲಿ ವಂಚನೆ: ನಟಿಯಿಂದ ದೂರು ದಾಖಲು

Krishnaveni K
ಬುಧವಾರ, 21 ಫೆಬ್ರವರಿ 2024 (15:31 IST)
Photo Courtesy: Twitter
ಮುಂಬೈ: ತನ್ನ ಹೆಸರು ಬಳಸಿ ಹಣಕಾಸಿನ ವಂಚನೆ ಮಾಡಲು ಹೊರಟವರ ವಿರುದ್ಧ ಬಾಲಿವುಡ್ ನಟಿ ವಿದ್ಯಾಬಾಲನ್ ಪೊಲೀಸರಿಗೆ ದೂರು ನೀಡಿದ್ದಾರೆ.

ವಿದ್ಯಾ ಬಾಲನ್ ಹೆಸರಿನಲ್ಲಿ ನಕಲಿ ಇನ್ ಸ್ಟಾಗ್ರಾಂ ಖಾತೆ ತೆರೆದು ಹಣ ವಸೂಲಿ ದಂಧೆ ಶುರು ಮಾಡಿದ್ದರು. ಇದು ಗಮನಕ್ಕೆ ಬಂದ ಕೂಡಲೇ ವಿದ್ಯಾ ಪೊಲೀಸರಿಗೆ ದೂರು ನೀಡಿದ್ದಾರೆ. ಅನೇಕ ದಿನಗಳಿಂದ ಈ ವಂಚನೆ ನಡೆಯುತ್ತಿದ್ದು ಇದೀಗ ಅವರ ಗಮನಕ್ಕೆ ಬಂದಿತ್ತು. ತಕ್ಷಣವೇ ಅವರು ಅಲರ್ಟ್ ಆಗಿದ್ದಾರೆ.

ಚಿತ್ರರಂಗದಲ್ಲಿ ಇಂತಹ ಘಟನೆಗಳು ನಡೆಯುವುದು ಇದೇ ಮೊದಲೇನಲ್ಲ. ಈ ಬಾರಿಯೂ ಅನೇಕ ಬಾರಿ ಇದೇ ರೀತಿ ಸ್ಟಾರ್ ಕಲಾವಿದರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸುವುದು, ಅವಕಾಶ ಕೊಡಿಸುವುದಾಗಿ ವಂಚಿಸುವುದು, ಹಣ ಪೀಕುವುದು ಇತ್ಯಾದಿ ದಂಧೆ ನಡೆಯುತ್ತಲೇ ಇತ್ತು. ಇದೀಗ ವಿದ್ಯಾ ಬಾಲನ್ ಇದಕ್ಕೆ ಲೇಟೆಸ್ಟ್ ಆಗಿ ಬಲಿಯಾಗಿದ್ದಾರೆ.

ಜನರಿಗೆ ನಂಬಿಕೆ ಬರಲು ವಿದ್ಯಾ ಬಾಲನ್ ಹೆಸರಿನ ಈಮೇಲ್ ಐಡಿಯನ್ನೂ ಕ್ರಿಯೇಟ್ ಮಾಡಿ ಕಿಡಿಗೇಡಿಗಳು ಹಂಚಿದ್ದರು. ಚಿತ್ರರಂಗದ ವಿದ್ಯಾ ಬಾಲನ್ ಸ್ನೇಹಿತರನ್ನು ಸಂಪರ್ಕಿಸಿ ಹಣ ಪೀಕಲು ಕಿಡಿಗೇಡಿಗಳು ಮಾರ್ಗ ಕಂಡುಕೊಂಡಿದ್ದರು. ಇದನ್ನು ತಿಳಿದ ಸ್ನೇಹಿತರೊಬ್ಬರು ವಿದ್ಯಾಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು ದೂರು ನೀಡಿದ್ದಾರೆ.

ಇತ್ತೀಚೆಗಷ್ಟೇ ವಿದ್ಯಾ ಬಾಲನ್ ಭೂಲ್ ಭುಲಯ್ಯ 3 ಸಿನಿಮಾಗೆ ಸಹಿ ಹಾಕಿದ್ದರು. ಈ ಖುಷಿಯ ನಡುವೆಯೇ ಇಂತಹ ವಂಚನೆ ಬೆಳಕಿಗೆ ಬಂದಿದೆ. ಪೊಲೀಸರು ಇದೀಗ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್, ಆತನ ಮಗನ ವಿರುದ್ಧ 23 ಪ್ರಕರಣ, ಲುಕ್‌ ಔಟ್ ನೋಟಿಸ್ ಜಾರಿ

ದರ್ಶನ್ ಜೈಲು ಸೇರಿದ ಬೆನ್ನಲ್ಲೇ ಫಾರ್ಮ್ ಹೌಸ್ ನ ಕುದುರೆಗಳ ಮಾರಾಟ

ರಾಜ್ಯ ಸರ್ಕಾರದ ವಿಶೇಷ ಯೋಜನೆಗೆ ರಾಯಭಾರಿಯಾದ ವಸಿಷ್ಠ ಸಿಂಹ

ಬಿಗ್‌ಬಾಸ್‌ ವೀಕ್ಷಕರಲ್ಲಿ ಕ್ಷಮೆಕೋರಿದ ಕಲರ್ಸ್ ಕನ್ನಡ ವಾಹಿನಿ

ರಾತ್ರೋರಾತ್ರಿ ದೊಡ್ಮನೆಯಿಂದ ಹೊರಬಂದ ಸ್ಪರ್ಧಿಗಳು, ರಕ್ಷಿತಾ ಹೇಳಿದ ಆ ಮಾತಿಗೆ ತಥಾಸ್ತು ಎಂದ್ರಾ ದೇವರು

ಮುಂದಿನ ಸುದ್ದಿ
Show comments