Select Your Language

Notifications

webdunia
webdunia
webdunia
webdunia

ನೌಕಾಪಡೆ ಅಧಿಕಾರಿಗಳ ಬಿಡುಗಡೆಯಲ್ಲಿ ನನ್ನ ಪಾತ್ರವಿಲ್ಲ: ಶಾರುಖ್ ಖಾನ್

Shahrukh Khan

Krishnaveni K

ಮುಂಬೈ , ಬುಧವಾರ, 14 ಫೆಬ್ರವರಿ 2024 (10:05 IST)
Photo Courtesy: Twitter
ಮುಂಬೈ: ಕತಾರ್ ನಿಂದ ನೌಕಾಪಡೆಯ 8 ಮಂದಿ ನಿವೃತ್ತ ಅಧಿಕಾರಿಗಳನ್ನು ಬಿಡುಗಡೆ ಮಾಡಿದ ವಿಚಾರದಲ್ಲಿ ನನ್ನ ಪಾತ್ರವಿಲ್ಲ ಎಂದು ಬಾಲಿವುಡ್ ನಟ ಶಾರುಖ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

ನಿನ್ನೆಯಷ್ಟೇ ಕತಾರ್ ನಲ್ಲಿ ಮರಣ ದಂಡನೆಗೆ ಗುರಿಯಾಗಿದ್ದ 8 ಮಂದಿ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿತ್ತು. ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ಕತಾರ್ ಈ ಕೆಲಸ ಮಾಡಿತ್ತು. ಆದರೆ ನೌಕಾ ಪಡೆ ಅಧಿಕಾರಿಗಳ ಬಿಡುಗಡೆ ಹಿಂದೆ ಶಾರುಖ್ ಖಾನ್ ಪಾತ್ರವಿದೆ ಎಂದು ಸುದ್ದಿ ಹಬ್ಬಿತ್ತು. ಇದರ ಬೆನ್ನಲ್ಲೇ ಬಾಲಿವುಡ್ ನಟ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಇಲ್ಲಿಗೆ ಶಾರುಖ್ ಖಾನ್ ಭೇಟಿ ನೀಡಿದ್ದರು. ಈ ವೇಳೆ ಶಾರುಖ್ ಈ ಅಧಿಕಾರಿಗಳನ್ನು ಬಿಡುಗಡೆ ಮಾಡಲು ಕತಾರ್ ಸರ್ಕಾರದ ಜೊತೆ ಮಾತುಕತೆ ನಡೆಸಿದ್ದರು ಎಂದು ಸುದ್ದಿ ಹಬ್ಬಿತ್ತು. ಈ ವಿಚಾರ ವೈರಲ್ ಆಗುತ್ತಿದ್ದಂತೇ ಶಾರುಖ್ ಮ್ಯಾನೇಜರ್ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ.

‘ಕತಾರ್ ನಿಂದ ಅಧಿಕಾರಿಗಳನ್ನು ಬಿಡುಗಡೆ ಮಾಡಿದ ವಿಚಾರದಲ್ಲಿ ಶಾರುಖ್ ಖಾನ್ ಪಾತ್ರವಿದೆ ಎಂದು ಸುದ್ದಿ ಹಬ್ಬಿದೆ. ಆದರೆ ಇದು ಕೇವಲ ಭಾರತ ಸರ್ಕಾರಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಇದರಲ್ಲಿ ಶಾರುಖ್ ಪಾತ್ರವಿಲ್ಲ. ಇಂತಹ ರಾಜತಾಂತ್ರಿಕ ವಿಚಾರನ್ನು ಸಮರ್ಥವಾಗಿ ನಿಭಾಯಿಸುವ ನಾಯಕತ್ವ ನಮಗಿದೆ. ಶಾರುಖ್ ಅವರೂ ಇತರೆ ಭಾರತೀಯರಂತೆ ಅಧಿಕಾರಿಗಳ ಬಿಡುಗಡೆ ವಿಚಾರಕ್ಕೆ ಖುಷಿಯಾಗಿದ್ದಾರೆ’ ಎಂದು ಸ್ಪಷ್ಟನೆ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿತೇಶ್ ಕೊಟ್ಟ ಗುಲಾಬಿ ಹೂವನ್ನು ಈಗಲೇ ಜೋಪಾನವಾಗಿಟ್ಟಿರುವ ಜೆನಿಲಿಯಾ