ಮುಂಬೈ: ಬಾಲಿವುಡ್ ನಟ ವಿಕ್ಕಿ ಕೌಶಾಲ್ ಪೌರಾಣಿಕ ಸಿನಿಮಾ ಮಹಾವತಾರದಲ್ಲಿ ಪರಶುರಾಮನ ಪಾತ್ರ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಮದ್ಯಪಾನ, ನಾನ್ ವೆಜ್ ಬಿಟ್ಟಿದ್ದಾರಂತೆ. ಇದಕ್ಕೆ ನೆಟ್ಟಿಗರು ಟ್ರೋಲ್ ಮಾಡಿದ್ದು, ಪತ್ನಿ ಜೊತೆ ಅದನ್ನೂ ಮಾಡಬೇಡಿ ಎಂದಿದ್ದಾರೆ.
ಅಮರ್ ಕೌಶಿಕ್ ಅವರ ಮಹಾವತಾರ ಸಿನಿಮಾದಲ್ಲಿ ವಿಕ್ಕಿ ಕೌಶಾಲ್ ಲಾರ್ಡ್ ಪರಶುರಾಮನ ಪಾತ್ರ ಮಾಡುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ಎಷ್ಟು ತೊಡಗಿಸಿಕೊಂಡಿದ್ದಾರೆಂದರೆ ಮದ್ಯಪಾನ, ಧೂಮಪಾನ, ನಾನ್ ವೆಜ್ ಆಹಾರವನ್ನೂ ಸೇವಿಸುತ್ತಿಲ್ಲವಂತೆ.
ಪುಣ್ಯ ಪುರುಷನ ಪಾತ್ರ ಮಾಡಲು ಅಷ್ಟೇ ಶರೀರ ಶುದ್ಧಿಯಿಂದ ಮಾಡಲು ಹೊರಟಿದ್ದಾರೆ. ಆದರೆ ಇದಕ್ಕೆ ಕೆಲವು ವರ್ಗದ ಜನ ಸೋಷಿಯಲ್ ಮೀಡಿಯಾದಲ್ಲಿ ಅವರನ್ನು ಟ್ರೋಲ್ ಮಾಡಿದ್ದಾರೆ. ಇಷ್ಟೆಲ್ಲಾ ಡ್ರಾಮಾ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಇದೆಲ್ಲಾ ತ್ಯಜಿಸುವ ನೀವು ಪತ್ನಿ ಜೊತೆ ರೊಮ್ಯಾನ್ಸ್ ಕೂಡಾ ಬಿಟ್ಟು ಬಿಡಿ ಎಂದು ಕಾಲೆಳೆದಿದ್ದಾರೆ. ಲೈಂಗಿಕ ಸಂಬಂಧವೂ ಒಳ್ಳೆಯದಲ್ಲ ಅಲ್ವಾ? ಎಂದು ವಿಕ್ಕಿ ಕೌಶಾಲ್ ರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ.