Webdunia - Bharat's app for daily news and videos

Install App

ಶಾರುಖ್ ಖಾನ್ ಆಫರ್ ಇದ್ದರೂ ಹಾಲಿವುಡ್ ನಲ್ಲಿ ನಟಿಸದಿರುವುದಕ್ಕೆ ಇದೇ ಮುಖ್ಯ ಕಾರಣವಂತೆ

Webdunia
ಗುರುವಾರ, 30 ಆಗಸ್ಟ್ 2018 (11:05 IST)
ಮುಂಬೈ : ಹಾಲಿವುಡ್ ನ ಸಿನಿಮಾಗಳಲ್ಲಿ ನಟಿಸಲು ನಟ ನಟಿಯರು ತುದಿಗಾಲಿನಲ್ಲಿ ನಿಂತಿರುವಾಗ ಬಾಲಿವುಡ್ ನ ಸ್ಟಾರ್ ನಟ ಶಾರುಖ್ ಖಾನ್ ಅವರು ಮಾತ್ರ ಅವಕಾಶವಿದ್ದರೂ ಕೂಡ  ಹಾಲಿವುಡ್ ಗೆ ಹಾರಲಿಲ್ಲ.


ಇದಕ್ಕೆ ಕಾರಣವೆನಿರಬಹುದು ಎಂಬ ಕುತೂಹಲ ಹಲವರಲ್ಲಿರಬಹುದು. ಇದಕ್ಕೆ ಉತ್ತರ ಇದೀಗ ಶಾರುಖ್ ಅವರೇ ನೀಡಿದ್ದಾರೆ. “ನಟಿ ಪ್ರಿಯಾಂಕಾ ಚೋಪ್ರಾ, ನವಾಜುದ್ದೀನ್ ಸಿದ್ಧಿಕಿ, ಇರ್ಫಾನ್ ಖಾನ್ ಸೇರಿದಂತೆ ಸಾಕಷ್ಟು ತಾರೆಯರು ಹಾಲಿವುಡ್​ನಲ್ಲಿ ಮಿಂಚಿದ್ದಾರೆ. ಅದೃಷ್ಟದ ಪರೀಕ್ಷೆ ಅವರ ಕೈ ಹಿಡಿದಿದೆ. ಆದ್ರೆ, ನಾನು ಮಾತ್ರ ಬಾಲಿವುಡ್​ನಲ್ಲೇ ಉಳಿದಿರುವೆ. ಇದುವರೆಗೂ ಯಾವುದೇ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಿಲ್ಲ. ಅದಕ್ಕೆ ಕಾರಣ ಇಂಗ್ಲಿಷ್. ನನಗೆ ಇಂಗ್ಲಿಷ್ ಅಷ್ಟು ಚೆನ್ನಾಗಿ ಬರುವುದಿಲ್ಲ. ಹಾಗಾಗಿ ನಾನು ಇಲ್ಲಿಯೇ ಉಳಿದಿದ್ದೇನೆ “ ಎಂದಿದ್ದಾರೆ.


ಅಲ್ಲದೆ “ಬಾಲಿವುಡ್ ಸಿನಿಮಾಗಳನ್ನು ಹಾಲಿವುಡ್​ನಲ್ಲಿ ಪರಿಚಯಿಸಬೇಕು ಎನ್ನುವುದು ನನ್ನ ಆಸೆ ಆಗಿದೆ. ಭಾರತೀಯ ನಟ-ನಟಿ ಯಾವತ್ತೂ ಹಾಲಿವುಡ್​ನಲ್ಲಿ ನಟಿಸಬೇಕು ಎಂದು ಅಂದುಕೊಂಡುರುವುದಿಲ್ಲ. ಇಲ್ಲಿರುವ ನಮ್ಮ ನಿರ್ದೇಶಕರೊಂದಿಗೆ ಕೆಲಸ ಮಾಡಬೇಕು” ಎಂದು ಹೇಳುವುದರ ಮೂಲಕ ಅವರು ಈಗಾಗಲೇ ಹಾಲಿವುಡ್​ಗೆ ಹಾರಿದವರಿಗೆ  ಟಾಂಗ್ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಲ್ಮಾನ್‌ ಖಾನ್‌ ಮತ್ತಷ್ಟು ಗಟ್ಟಿಯಾಗಿ ವಾಪಾಸ್ಸಾಗುತ್ತಾರೆ: ಇಮ್ರಾನ್ ಹಸ್ಮಿ ಹೀಗಂದಿದ್ಯಾಕೆ

ಕ್ರೈಸ್ತರ ಭಾವನೆಗೆ ಅಗೌರವ: ನಟ ಸನ್ನಿ ಡಿಯೋಲ್, ರಣದೀಪ್ ವಿರುದ್ಧ ಪ್ರಕರಣ ದಾಖಲು

ವಿಶೇಷ ಬೇಡಿಕೆಯನ್ನು ಮುಂದಿಟ್ಟ ಬಳುಕುವ ಬಳ್ಳಿ ಊರ್ವಸಿ, ಟ್ರೋಲ್ ಆದ ನಟಿ

ವಿದೇಶಿ ಹುಡುಗನ ಜತೆ ಅರ್ಜುನ್ ಸರ್ಜಾ ಎರಡನೇ ಪುತ್ರಿ ನಿಶ್ಚಿತಾರ್ಥ, ಹುಡುಗ ಯಾರು

ದಾಂಪತ್ಯಕ್ಕೆ 5 ವರ್ಷದ ಸಂಭ್ರಮ: ಪತ್ನಿ ರೇವತಿಗೆ ವಿಶೇಷವಾಗಿ ಶುಭಕೋರಿದ ನಿಖಿಲ್ ಕುಮಾರಸ್ವಾಮಿ

ಮುಂದಿನ ಸುದ್ದಿ
Show comments