ಹೈದರಾಬಾದ್: ಇಷ್ಟು ದಿನ ನ್ಯಾಷನಲ್ ಕ್ರಶ್ ಎಂದು ಕರೆಯಿಸಿಕೊಳ್ಳುತ್ತಿದ್ದ ರಶ್ಮಿಕಾ ಮಂದಣ್ಣ ಸ್ಥಾನಕ್ಕೆ ಇದೀಗ ಧಕ್ಕೆ ಬಂದಿದೆ.
ಶ್ರೀವಲ್ಲಿಯನ್ನು ಹಿಂದಿಕ್ಕಿರುವ ಬಾಲಿವುಡ್ ತಾರೆ ಕಿಯಾರಾ ಅಡ್ವಾಣಿ ಅಭಿಮಾನಿಗಳಿಗೆ ಪಾಲಿಗೆ ಈಗ ಹೊಸ ನ್ಯಾಷನಲ್ ಕ್ರಶ್ ಆಗಿದ್ದಾರೆ.
ಇತ್ತೀಚೆಗಷ್ಟೇ ಸಿದ್ಧಾರ್ಥ್ ಮಲ್ಹೋತ್ರಾ ಮಡದಿಯಾಗಿರುವ ಕಿಯಾರಾಗೆ ಅಭಿಮಾನಿಗಳು ಹೊಸ ನ್ಯಾಷನಲ್ ಕ್ರಶ್ ಎಂದಿದ್ದಾರೆ. ಮೊನ್ನೆಯಷ್ಟೇ ಮಹಿಳಾ ಐಪಿಎಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ನೃತ್ಯ ಮಾಡಿ ಮಿಂಚಿದ್ದ ಕಿಯಾರಾಳನ್ನು ಅಭಿಮಾನಿಗಳು ನೀವೇ ನ್ಯಾಷನಲ್ ಕ್ರಶ್ ಎಂದಿದ್ದಾರೆ. ಹೀಗಾಗಿ ಈಗ ರಶ್ಮಿಕಾರ ನ್ಯಾಷನಲ್ ಕ್ರಶ್ ಬಿರುದಿಗೆ ಕಿಯಾರರಿಂದ ಪೈಪೋಟಿ ಎದುರಾಗಿದೆ.